ಲಿಂಗಾಯತರಲ್ಲಿ ಒಗ್ಗಟ್ಟು ಮೂಡಲಿ

3
Published on

ಮೂಡಲಗಿ: ಲಿಂಗಾಯತ ಸಮುದಾಯ ಒಂದೇ ಎನ್ನುವ ಮನೋಭಾವ ಎಲ್ಲ ಒಳಪಂಗಡಗಳಲ್ಲಿ ಮೂಡಬೇಕು ಎಂದು ಸಂಸದ ಜಗದೀಶ ಶೆಟ್ಟರ್​ ಹೇಳಿದರು.

ಪಟ್ಟಣದಲ್ಲಿ ತಾಲೂಕು ಬಣಜಿಗ ಸಮಾಜ ೇಮಾಭಿವದ್ಧಿ ಸಂದ 16ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು. ಉಪಪಂಗಡಗಳು ಮೂಲ ಲಿಂಗಾಯತ ಧರ್ಮಕ್ಕೆ ಚ್ಯುತಿಬಾರದಂತೆ ಎಚ್ಚರವಹಿಸಬೇಕು. ಜಾತಿ, ಮತ ಭೇದ ಮಾಡದೆ ಎಲ್ಲರೊಂದಿಗೆ ಸೌಜನ್ಯದಿಂದ ಇರಬೇಕು. ಸಮುದಾಯದ ದುರ್ಬಲರನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಯುವ ಮುಖಂಡ ಸವೋರ್ತ್ತಮ ಜಾರಕಿಹೊಳಿ ಮಾತನಾಡಿ, ಬಣಜಿಗ ಸಮುದಾಯದ ಬೆಳವಣಿಗೆಗೆ ಪೂರ್ಣ ಸಹಕಾರ ನೀಡುವ ಸಂದೇಶವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ನೀಡಿದ್ದಾರೆ. ಸಮುದಾಯದ ಜನರು ಒಗ್ಗಟ್ಟಿನಿಂದ ಬೆಳೆಯಬೇಕು ಎಂದರು.
ಮುಖ್ಯಅತಿಥಿ ಸಾಹಿತಿ ಡಾ. ಸಂಗಮನಾಥ ಲೋಕಾಪುರ ಉಪನ್ಯಾಸ ನೀಡಿದರು.

75 ವರ್ಷ ಪೂರೆಸಿದವರು, ಎಸ್​ಎಸ್​ಎಲ್​ಸಿ, ದ್ವೀತಿಯ ಪಿಯುಸಿ, ಪದವಿ ಸಾಧಕ ವಿದ್ಯಾರ್ಥಿಗಳು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಶಿವಬೋಧರಂಗ ಮಠದ ದತ್ತಾತ್ರೇಯಬೋಧ ಸ್ವಾಮೀಜಿ, ಬಣಜಿಗ ಸಂದ ಜಿಲ್ಲಾಧ್ಯ ಮಲ್ಲಿಕಾರ್ಜುನ ಕನಶೆಟ್ಟಿ, ತಾಲೂಕಾಧ್ಯ ಶಿವಪ್ಪ ಭುಜನ್ನವರ, ಉಪಾಧ್ಯ ಪ್ರಕಾಶ ಪುಠಾಣಿ, ಮಹಿಳಾ ಟಕದ ಅಧ್ಯೆ ಮಂಜುಳಾ ವಾಣಿ, ರಾಜೇಶ್ವರಿ ಗಾಡವಿ, ವೀರಭದ್ರ ಜಕಾತಿ, ಚಿದಾನಂದ ಶೆಟ್ಟರ, ಶಿವಾನಂದ ಗಾಡವಿ, ವಿರೂಪಾ ಗಾಡವಿ, ಸುಭಾಸ ಅವಟಿ, ಸಂತೋಷ ಅಂಗಡಿ, ಪ್ರಕಾಶ ಶೀಲವಂತ, ಸಂಗಪ್ಪ ಅಂಗಡಿ, ಬಸಟ್ಟೆಪ್ಪ ಗಾಡವಿ, ಸಂದ ಕಾರ್ಯದರ್ಶಿ ಚಿದಾನಂದ ಶೆಟ್ಟರ, ಪ್ರಭಾವತಿ ಜಕಾತಿ, ಬಾಲಶೇಖರ ಬಂದಿ, ನಿಂಗಪ್ಪ ಯಕ್ಕುಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net