ಕಲಬುರಗಿ : ಕಾಂಗ್ರೆಸ್ ಪಕ್ಷದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಲಿಂಗಾಯತರು ಆಯ್ಕೆಯಾಗಿದ್ದು, ಲಿಂಗಾಯತರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು ಎಂದು ಕಲಬುರಗಿ ಜಿಲ್ಲಾ ವೀರಶೈವ ಸಮಾಜ ಅದ್ಯಕ್ಷರಾದ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಒತ್ತಾಯಿಸಿದರು.
ಕುರುಬರು ಮತ್ತು ಒಕ್ಕಲಿಗರು ಸಿಎಂ ಬೇಡಿಕೆ ಮಂಡಿಸುತ್ತಿರುವಾಗಲೇ ಲಿಂಗಾಯತರು ತಮ್ಮವನ್ನು ಸಿಎಂ ಮಾಡುವಂತೆ ಧ್ವನಿ ಎತ್ತಿ ಜೋರು ಕೂಗು ಹಾಕಲು ಶುರುವಿಟ್ಡಿದ್ದಾರೆ. ಈ ಸಲ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ್ದರಿಂದಲೇ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಲಿಂಗಾಯತರಿಗೆ ಸಿಎಂ ಮಾಡಬೇಕು ನಗರದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮನವಿ ಮಾಡಿದರು.
ವೀರಶೈವ- ಲಿಂಗಾಯತ ಸಮಾಜದವರನ್ಬು ಕಾಂಗ್ರೆಸ್ ಕಡೆಗಣಿಸಬಾರದು. ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಮೊದಲಾದವರು ಹಿರಿಯರು ಇದ್ದಾರೆ ಅವರಲ್ಲಿ ಒಬ್ಬರನ್ನು ಮುಖ್ಯ ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ ತಳ್ಳಳ್ಳಿ, ಶಶಿಕಾಂತ ಪಾಟೀಲ್ ಚಿತ್ತಾಪುರ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ, ಕಾರ್ಯದರ್ಶಿ ಮಂಜು ರೆಡ್ಡಿ ಮೊದಲಾದವರು ಇದ್ದರು.