ಲಿಂಗಾಯತ ಸ್ವತಂತ್ರ ಧರ್ಮ

Sharan Vijayotsava
ಬಸವಕಲ್ಯಾಣದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ವಿಜಯೋತ್ಸವ ನಾಡಹಬ್ಬ ಕಾರ್ಯಕ್ರಮದಲ್ಲಿ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಶ್ರೀ ಸಿದ್ಧರಾಮ ಶರಣರು ಬೆಲ್ದಾಳೆ, ಪೂಜ್ಯ ಗಾಯತ್ರಿ, ರಾಜೇಂದ್ರಕುಮಾರ ಗಂದಗೆ, ಆನಂದ ದೇವಪ್ಪ, ಮಲ್ಲಿಕಾರ್ಜುನ ಚಿರಡೆ, ಕಾಶಪ್ಪ ಸಕ್ಕರಬಾವಿ ಇತರರಿದ್ದರು.
Published on

ಬಸವಕಲ್ಯಾಣ: ಹಿಂದು ಧರ್ಮದ ಭಾಗವಲ್ಲ, ಸನಾತನ ಧರ್ಮದ ಭಾಗವೂ ಅಲ್ಲ. ಇದೊಂದು ಸ್ವಾತಂತ್ರ್ಯಧರ್ಮವಾಗಿದೆ ಎಂದು ಬಸವ ಮಹಾಮನೆ ಸಂಸ್ಥೆ ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಏಳನೇ ದಿನವಾದ ಭಾನುವಾರ ಆಯೋಜಿಸಿದ ಲಿಂಗಾಯತ ಸ್ವಾತಂತ್ರ್ಯ ಧರ್ಮದ ಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ವೀರಶೈವ ಎನ್ನುವುದು ೧೨ನೇ ಶತಮಾನದ ನಂತರ ಹುಟ್ಟಿಕೊಂಡಿದೆ. ಶರಣ ಸಾಹಿತ್ಯಕ್ಕೆ ವೇದ, ಆಗಮ, ಸಂಸ್ಕೃತ ಮೂಲವಲ್ಲ. ಇದು ಅಪ್ಪಟ್ಟ ಸ್ವಾನುಭಾವದ ಕಾಯಕ ಜೀವಿಗಳ ವೈಚಾರಿಕ ಮತ್ತು ವೈಜ್ಞಾನಿಕ ಧರ್ಮವಾಗಿದೆ ಎಂದರು.

ಸರ್ಕಾರಿ, ಅರೆಸರ್ಕಾರಿ ನೌಕರರ ಪತ್ತಿನ ಸಹಕಾರ ಸೌಹಾರ್ದ ಸಂಘದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಉದ್ಘಾಟಿಸಿ ಮಾತನಾಡಿ, ಲಿಂಗಾಯತರೆಲ್ಲರೂ ಜಾಗ್ರತರಾಗಿ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ, ಜಾತಿಯಲ್ಲಿ ಆಯಾ ಜಾತಿ ಬರೆಸಬೇಕು. ಬರುವ ದಿನಗಳಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯುತ್ತದೆ ಎಂದರು.

ರಾಜ್ಯ ಲಿಂಗಾಯತ ಯುವ ಒಕ್ಕೂಟದ ಅಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ೧೨ನೇ ಶತಮಾನದಲ್ಲಿ ಗುರು ಬಸವಣ್ಣನವರು ಸ್ಥಾಪಿತ ಧರ್ಮ ಲಿಂಗಾಯತ. ಇದಕ್ಕೆ ಸಾಂವಿಧಾನಾತ್ಮಕ ಮಾನ್ಯತೆಗಾಗಿ ಹೋರಾಟ ನಡೆದಿವೆ ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿದರು. ಪೂಜ್ಯ ಗಾಯತ್ರಿ ಸಮ್ಮುಖ ವಹಿಸಿದ್ದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ನಿರ್ದೇಶಕರಾದ ಕಾಶಪ್ಪ ಸಕ್ಕರಬಾವಿ, ಪ್ರಮುಖರಾದ ಕಂಟೆಪ್ಪ ಗಂದಿಗುಡಿ, ವೀರಶೆಟ್ಟಿ ಪಾಟೀಲ್, ಗಣೇಶ ಬಿರಾದಾರ್, ಜಗದೀಶ ಪಾಟೀಲ್, ಮೀಲಿಂದ ಗುರೂಜಿ, ಆಕಾಶ ಖಂಡಾಳೆ, ಮಹಾದೇವ ಮಹಾಜನ, ಜಗದೀಶ್ ಬಿರಾದಾರ್, ವಿಜಯಕುಮಾರ ಕುಮಸಿ, ಶಿವಕುಮಾರ ಬಿರಾದಾರ್, ಶೋಭಾ ಬಾಪುರಾವ, ಗುಲಾಬರಾವ ತ್ರಿಮುಖೆ, ಧನರಾಜ ರಾಜೋಳೆ, ಚಂದ್ರಕಾಂತ ಮೇತ್ರೆ, ಯಶ್ವಂತ ಗಣೇಶ ಇತರರಿದ್ದರು. ಶಿವಕುಮಾರ ಶೆಟಕಾರ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು. ಜಗದೇವಿ ಜವಳಗೆ ನಿರೂಪಣೆ ಮಾಡಿದರು.

ಲಿಂಗಾಯತ ಸಂಸ್ಕೃತಿ ಒಂದು ಸಮುದಾಯದಲ್ಲ. ಇಡೀ ಮಾನವ ಜನಾಂಗದ ಶ್ರೇಷ್ಠತೆ, ಅಸ್ಮಿತೆಗೆ ಘನತೆ ತಂದು ಕೊಟ್ಟಿದೆ. ಈ ಸಂಸ್ಕೃತಿ ಅಳಿಯಬಾರದು ಉಳಿಯಬೇಕು ಮತ್ತು ಬೆಳೆಯಬೇಕು.

| ಪೂಜ್ಯ ಡಾ.ಗಂಗಾಂಬಿಕೆ ಅಕ್ಕ

ಹರಳಯ್ಯನವರ ಗವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net