ಲಿಂಗಾಯತ ಸಮಾನತೆಯ ಧರ್ಮ

6
Published on

ಬೈಲಹೊಂಗಲ: ವಿಶ್ವಗುರು ಬಸವಣ್ಣನಿಂದ ಸ್ಥಾಪಿಸಲ್ಪಟ್ಟ ಲಿಂಗಾಯತ ಧರ್ಮ ಜಗತ್ತಿನಲ್ಲಿಯೇ ವಿಶಿಷ್ಟವಾಗಿದೆ. ಹೆಣ್ಣು&ಗಂಡು ಹಾಗೂ ಮೇಲು&ಕೀಳು ಇಲ್ಲದ ಸಮಾನತೆಯ ಧರ್ಮ ಎಂದು ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಈಚೆಗೆ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಬಸವ ಜ್ಯೋತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಲಿಂಗಾಯತ ಧರ್ಮಕ್ಕೆ ಭವ್ಯ ಪರಂಪರೆಯಿದ್ದು, ಕಾಲಕಾಲಕ್ಕೆ ಮಹಾತ್ಮರು ಪುನರುತ್ಥಾನಗೊಳಿಸುತ್ತ ಬಂದಿದ್ದಾರೆ. ಧರ್ಮದ ಸಿದ್ಧಾಂತಗಳನ್ನು ಪ್ರವಚನ, ರಾಷ್ಟ್ರೀಯ ಬಸವದಳ ಸಂಟನೆಯ ಮೂಲಕ ದೇಶಾದ್ಯಂತ ವ್ಯಾಪಕ ಪ್ರಚಾರ ಮಾಡಿದ ಮೊದಲಿಗರು ಲಿಂಗಾನಂದ ಅಪ್ಪಾಜಿ ಹಾಗೂ ಮಾತೆ ಮಹಾದೇವಿ ಅವರು ಎಂದರು. ಶಿವಪುರ&ಉಳವಿಯ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ವಚನಗಳ ಸಾರ ಅರಿತು ಪಾಲಿಸಬೇಕು ಎಂದರು.

ಶರಣ ವೆಂಕರಾಪುರ ಪೂಜ್ಯರು, ವಿಜಯಲಕ್ಷಿ$್ಮ ತೋಟಗಿ, ಅತಿಥಿ ಗಂಗಪ್ಪ ಗುಗ್ಗರಿ ಮಾತನಾಡಿದರು. ಶಂಕರ ಬೋಳಣ್ಣವರ, ಶ್ರೀಶೆಲ ಯಡಳ್ಳಿ, ಶ್ರೀಕಾಂತ ಮಾಳಕ್ಕನವರ, ಶಿವಪ್ಪ ಮತ್ತಿಕೊಪ್ಪ, ಸುಧೀರ ವಾಲಿ ವೀರೇಶ ಹಲಕಿ, ಶಿವಾನಂದ ಆನಂದಿ, ಈರಣ್ಣ ಸಣ್ಣಮನಿ, ಶ್ರೀಶೆಲ ಆಲದಕಟ್ಟಿ, ರಮೇಶ ಸಂಗೊಳ್ಳಿ, ಶಂಕರ ಕೊರಿಕೊಪ್ಪ, ಕೀರಪ್ಪ ಕುರುಬರ, ಉಳವಪ್ಪ ಶಿಂತ್ರಿ,ರವಿ ಬೆಲವಾಡ, ಗದಿಗೆಪ್ಪ ಮುರಗೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net