

ಹಾಸನ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಹಾಸನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಭಾನುವಾರ ಹಾಸನ ತಣ್ಣೀರುಹಳ್ಳ ಮಠದಲ್ಲಿ ನಡೆಯಿತು. ಮಹಾಸಭಾದ ಹಾಸನ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಾಸಭಾದ ಸಹಾಯಕ ಚುನಾವಣಾಧಿಕಾರಿ ದಿವಾಕರ್ ಸಮ್ಮುಖದಲ್ಲಿ ಮಹಾಸಭಾದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತಾಲೂಕು ಘಟಕದ ಉಪಾಧ್ಯಕ್ಷರಾಗಿ ಎಚ್.ಪಿ. ಹೇಮೇಶ್ ಕುಮಾರ್, ಲೀಲಾ ಧರ್ಮಪ್ಪ, ಪ್ರದಾನ ಕಾರ್ಯದರ್ಶಿಯಾಗಿ ಎಚ್.ವಿ. ಹೇಮಂತ್ ಕುಮಾರ್, ಕೋಶಾಧ್ಯಕ್ಷರಾಗಿ ಸಿ.ಎಸ್. ಕುಮಾರ್ ಸ್ವಾಮಿ, ಸಹಕಾರ್ಯದರ್ಶಿಗಳಾಗಿ ಶೆಟ್ಟಿಹಳ್ಳಿ ಧರ್ಮ, ಚಾಂದಿನಿ ಭೂಷಣ್ ಹಾಗೂ ಹಾಸನ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಎಚ್.ಕೆ.ಪ್ರದೀಪ್ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎನ್. ಪರಮೇಶ್, ಜಿಲ್ಲಾ ನಿರ್ದೇಶಕ ಶೋಭನ್ ಬಾಬು, ತಾಲೂಕು ಸಮಿತಿಯ ನಿರ್ದೇಶಕರಾದ ಟಿ ಪಿ ನಾಗರಾಜ್, ರಾಜಶೇಖರ್ ಮೂರ್ತಿ, ಮಯೂರಿ ಲೋಕೇಶ್, ಮದನ್, ಕೆ. ಮಿಥುನ್, ಬಿ.ಎಸ್. ದರ್ಶನ, ಎಚ್.ಕೆ. ದೀಲಿಪ್, ಟಿ.ಎನ್. ಮಂಜು, ಎ.ಅರ್. ಸಾವಿತ್ರಮ್ಮಾ. ಎಸ್.ವೇದಾವತಿ ಮಲ್ಲಿಕಾರ್ಜುನ್ ಇದ್ದರು.