ಲಿಂಗಾಯತ ಜಾತಿ ಪ್ರಮಾಣ ಪತ್ರ ನೀಡಿ

22BSK2
Published on

ಬಸವಕಲ್ಯಾಣ: ಲಿಂಗಾಯತ ಸಮುದಾಯದವರಿಗೆ ಲಿಂಗಾಯತ ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಬಸವದಳ ಸ್ಥಳೀಯ ಶಾಖೆ ಪದಾಧಿಕಾರಿಗಳು ಹಾಗೂ ಪ್ರಮುಖರ ನಿಯೋಗದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರಿಗೆ ಬರೆದ ಮನವಿ ಪತ್ರವನ್ನು ಉಪ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಲಾಯಿತು.

ಲಿಂಗಾಯತರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಲೋಪದೋಷಗಳಾಗುತ್ತಿವೆ. ಪೂರ್ವಜರ ದಾಖಲೆಗಳಲ್ಲಿ ಮೂಲ ಜಾತಿ ಲಿಂಗಾಯತ ಎಂದು ನಮೂದಿಸಿದರೂ ಪ್ರಸ್ತುತ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ಕಂದಾಯ ಇಲಾಖೆ ವೀರಶೈವ-ಲಿಂಗಾಯತ ಎಂದು ಪ್ರಮಾಣ ಪತ್ರ ನೀಡುತ್ತಿದೆ. ಇದರಿಂದ ಲಿಂಗಾಯತರ ಭಾವನೆಗೆ ಧಕ್ಕೆ ಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜದಲ್ಲಿ ಇತರ ಜಾತಿ ಜನರಿಗೆ ಅವರು ಕೇಳಿದ ಜಾತಿ ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಆದರೆ ಲಿಂಗಾಯತರಿಗೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ. ಕುರಿತು ಧಾರವಾಡ ಹೈ-ಕೋಟ್೯ನಲ್ಲಿ ದಾವೆ ಹೂಡಲಾಗಿದ್ದು, ತೀರ್ಪು ನಮ್ಮ ಪರವಾಗಿ ಬಂದು, ಕ್ರಮಕ್ಕಾಗಿ ಸೂಚಿಸಿ ಸರ್ಕಾರಕ್ಕೆ ಆದೇಶ ಹೊರಡಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಬಸವ ಮಹಾಮನೆಯ ಶ್ರೀ ಬಸವಪ್ರಭು ಸ್ವಾಮೀಜಿ, ರಾಷ್ಟ್ರೀಯ ಬಸವದಳ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ, ಮಾತೆ ಸುಜ್ಞಾನಿದೇವಿ, ಸಂತೋಷ ಉಜಳಂಬೆ, ಶಿವಕುಮಾರ ಕುಂಬಾರಗೆರೆ, ಸಿದ್ದರಾಮಪ್ಪ ಹಂಗರಗೀಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net