

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಅಂಜುಮನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಿಂದ ಈಚೆಗೆ ಏರ್ಪಡಿಸಿದ್ದ ರಾಣಿ ಚನ್ನಮ್ಮ ವಿವಿ ವ್ಯಾಪ್ತಿಯ ಏಕವಲಯ ವೇಟ್ ಲಿಪ್ಟಿಂಗ್ ಪಂದ್ಯಾವಳಿಯಲ್ಲಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಒಟ್ಟು 38 ಅಂಕಗಳೊಂದಿಗೆ ಪಂದ್ಯಾವಳಿಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ ನಾಲ್ಕು ಚಿನ್ನ, 1ಬೆಳ್ಳಿ ಹಾಗೂ ಕಂಚಿನ ಪದಕ ಪಡೆದು, 19 ಅಂಕದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಎರಡು ಚಿನ್ನ ಹಾಗೂ ಮೂರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಬಿ.ಕಾಂ 5ನೇ ಸೆಮಿಸ್ಟರ್‌ನ ಕಾವ್ಯಾ ಮೊಕಾಶಿ, ಬಿ.ಎ 5ನೇ ಸೆಮಿಸ್ಟರ್‌ನ ಚನ್ನವೀರೇಶ ಹಿಕ್ಕಿಮಠ, ಬಿ.ಎ 3 ಸೆಮಿಸ್ಟರ್‌ನ ಸಿ. ಶಿವಮಣಿ ಯುನಿವರ್ಸಿಟಿ ಬ್ಲೂ ಆಗಿ ಹೊರಹೊಮ್ಮಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಲಕ್ಷ್ಮೀ ಕಾಂಬಳೆ 48 ಕೆಜಿಯಲ್ಲಿ ಬೆಳ್ಳಿ ಪದಕ, ಅನಿತಾ ದಡ್ಡಿ 53 ಕೆಜಿಯಲ್ಲಿ ಬೆಳ್ಳಿ, ಕಾವ್ಯಾ ಮೊಕಾಶಿ 58 ಕೆಜಿಯಲ್ಲಿ ಚಿನ್ನ, ಸ್ಪುರಾ ನಾಯಿಕ್ 77 ಕೆಜಿಯಲ್ಲಿ ಬೆಳ್ಳಿ ಹಾಗೂ ಶೈಲಾ ಅರ್ಜುನಗಿ 86 ಕೆಜಿ ವಿಭಾಗದಲ್ಲಿ ಚಿನ್ನದ ಪದಕ.
ಪುರುಷರ ವಿಭಾಗದಲ್ಲಿ: ಪ್ರವೀಣ ಕುದ್ರಿಮೋತಿ 60ಕೆಜಿಯಲ್ಲಿ ಬೆಳ್ಳಿ, ಸಂಜಯ ಪಾಟೀಲ 65ಕೆಜಿಯಲ್ಲಿ ಕಂಚು, ಸಿ.ಶಿವಮಣಿ 71 ಕೆಜಿಯಲ್ಲಿ ಚಿನ್ನ, ಸೌರಭ ಪಾಟೀಲ 88ಕೆಜಿಯಲ್ಲಿ ಚಿನ್ನ ಹಾಗೂ 110ಕೆಜಿ ವಿಭಾಗದಲ್ಲಿ ಪ್ರಜ್ವಲ್ ಹಲ್ಲೋಳ್ಳಿ ಮತ್ತು ಚನ್ನವೀರೇಶ ಹಿಕ್ಕಿಮಠ ಚಿನ್ನದ ಪದಕ ಪಡೆದುಕೊಂಡರು. ಈ ಸಾಧನೆಗೆ ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಚಿ.ರಾಮಾರಾವ್, ಸಿಬ್ಬಂದಿ ಅಭಿನಂದಿಸಿದ್ದಾರೆ.