

ಜಿಲ್ಲಾಮಟ್ಟದ ವಿವಿಧ ಕ್ರೀಡಾಕೂಟದಲ್ಲಿ ಪ್ರಶಸ್ತಿಗೆ ಭಾಜನವಾದ ಲಿಂಗರಾಜು ಕಾಲೇಜು
ಬೆಳಗಾವಿ: ಕೆಎಲ್‌ಇ ಸೊಸೈಟಿಯ ಲಿಂಗರಾಜ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ 2023-24 ನೇ ಸಾಲಿನ ಜಿಲ್ಲಾಮಟ್ಟದ ಫುಟ್‌ಬಾಲ್ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಬೆಳಗಾವಿಯ ಸೇಂಟ್ ಮೇರಿಸ್ ಕಾಲೇಜಿನ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ವಿವಿಧ ಕ್ರೀಡಾಕೂಟ ಆಯೋಜಿಸಲಾಗಿತ್ತು.ಫುಟ್‌ಬಾಲ್ ತಂಡದಲ್ಲಿ ಅಯಾನ್ ಕೆ, ರೆಹಾನ್ ಕೆ, ಸ್ಪರ್ಶ್ ಡಿ, ಜೈದೇವ್ ಎಸ್, ತಾನಿಸ್ಕ್ ಎ, ಸುದರ್ಶನ್ ಎಂ, ಅಭಿಷೇಕ್ ಸಿ, ಸಲ್ಮಾನ್ ಎಂ, ಖಿಜರ್ ಡಿ, ಅಮಾನ್ ಬಿ, ಜಯಾನ್ ಡಿ, ಸುಡಾನ್ಶು ಸಂಜು ಎ, ಆಯುಷ್ ಕೆ, ಜಿಯಾ ಕೆ, ಸೊಹೀಲ್ ಕೆ, ಸಮಿಎನ್ ಮತ್ತು ಸಿನಾನ್ ಎಸ್ ಅವರನ್ನು ಒಳಗೊಂಡಿತ್ತು.
ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಟೂರ್ನಾಮೆಂಟ್‌ದಲ್ಲಿ ಕೂಡ ಲಿಂಗರಾಜ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಓಂ ಕಳಸಣ್ಣವರ, ಅಥರ್ವ ಹುಬ್ಬಳಿಕರ್ ಮತ್ತು ಸೌರಭ ಭಾವಿಕಟ್ಟಿ ವಿಜೇತರಾಗಿ (ಬಾಲಕರು) ಮತ್ತು ಐಶ್ವರ್ಯ ತಳವಾಲ್ಕರ್ ಮತ್ತು ಸಂಪದಾ ರೇಶ್ಮಿ ರನ್ನರ್ ಅಪ್ (ಬಾಲಕಿಯರು) ಆಗಿ ಹೊರಹೊಮ್ಮಿದ್ದಾರೆ. ಡಿವೈಇಎಸ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಬಾಕ್ಸಿಂಗ್‌ನಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಅಂಶುಲ್. ವಿ 57 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಸಿದ್ದ್ದಾಂತ್ ಯಾದವ್ ಅವರು -63 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.ರಾಮದುರ್ಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ತೇಜಸ್ವಿನಿ ಬಡಕನ್ನವರ್ ಅವರು ಟೇಕ್ವಾಂಡೋದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅವರ ಅನುಕರಣೀಯ ಸಾಧನೆಗಾಗಿ ಆಡಳಿತ ಮಂಡಳಿ ಸದಸ್ಯರು, ಪದವಿ ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ, ಪದವಿಪೂರ್ವ ಪ್ರಾಚಾರ್ಯೆ ಗಿರಿಜಾ ಹಿರೇಮಠ, ದೈಹಿಕ ನಿರ್ದೇಶಕ ಡಾ.ಸಿ.ರಾಮರಾವ್ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.