ಲಿಂಗನಮಠ ಕೆರೆ ದುರಸ್ತಿಗೆ ಕ್ರಮ

2
Published on

ಕಕ್ಕೇರಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಕಲ್ಲಪ್ಪನ ಕೆರೆಯ ದುರಸ್ತಿ ಜತೆಗೆ ರಾಜಕಾಲುವೆ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್​.ಎಸ್​. ಬೋಸರಾಜು ಹೇಳಿದರು.

ಖಾನಾಪುರ ತಾಲೂಕಿನ ಲಿಂಗನಮಠ ಸಮೀಪದ ಹುಲಿಕೇರಿ ಇಂದಿರಮ್ಮನ ಕೆರೆಗೆ ಮಂಗಳವಾರ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿಆರ್​ಜೆ ಅವರೊಂದಿಗೆ ಬಾಗಿನ ಅರ್ಪಿಸಿ ಮಾತನಾಡಿದರು. ಲಿಂಗನಮಠ ಮತ್ತು ಚುಂಚವಾಡ ಗ್ರಾಮದ ರೆತರು ಹೊಲ ಗದ್ದೆಗಳಿಗೆ ಹೋಗಲು ಬ್ರಿಡ್ಜ್​ ಕಂ ಬ್ಯಾರೇಜ್​ ನಿರ್ಮಿಸಲು ಮಂಜೂರಾತಿ ನೀಡಿ ರೆತರಿಗೆ ಅನುಕೂಲ ಮಾಡಲಾಗುವುದು ಎಂದು ಭರವಸೆ ನೀಡಿದರು.

ತಟ್ಟಿ ಹಳ್ಳಕ್ಕೆ ಕಾಲುವೆ ನಿರ್ಮಿಸಿ, ಆ ನೀರನ್ನು ಗೋಮಾರಿ ಕೆರೆಯಲ್ಲಿ ಶೇಖರಿಸಿ ಗೇಟ್​ ಮೂಲಕ ಪಕ್ಕದ ರಾಮಾಪುರ, ಭೂರನಕಿ, ಚುಂಚವಾಡ, ಲಿಂಗನಮಠ ಹಾಗೂ ಗೋದೋಳ್ಳಿ ಕೆರೆಗೆ ನೀರು ಹರಿಸುವುದರಿಂದ ಕರೆ ಸುತ್ತಮುತ್ತಲಿನ ನೂರಾರು ಎಕರೆ ನೀರಾವರಿಗೊಳಪಡುತ್ತದೆ. ರೈತರಿಗೆ ಅನುಕೂಲ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆಯಿಂದ ಕಾಲುವೆ ನಿರ್ಮಾಣಕ್ಕೆ ಮಂಜೂರಾತಿ ನೀಡಬೇಕು ಎಂದು ಸಚಿವ ಬೋಸರಾಜು ಅವರಿಗೆ ಲಿಂಗನಮಠ ಗ್ರಾಪಂ ಅಧ್ಯ ಕಾಶೀಂ ಹಟ್ಟಿಹೋಳಿ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡರಾದ ಪಾಂಡುರಂಗ ಮೀಟಗಾರ, ಬಸವರಾಜ ನಾಯಕ, ರಾಜು ಮಾಟೊಳ್ಳಿ, ಹಬೀಬ್​ ಹಂದುರ ಹಾಗೂ ರೆತ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net