ಲಿಂಗದೀಕ್ಷೆ ಕಾರ್ಯ ಶ್ಲಾಘನೀಯ

1ckd1
Published on

ಚಿಕ್ಕೋಡಿ: ವೀರಶೈವ ಲಿಂಗಾಯತರು ಪ್ರತಿದಿನ ಬೆಳಗ್ಗೆ ಲಿಂಗಪೂಜೆ ಮಾಡಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಕಬ್ಬೂರಿನ ರೇವಣಸಿದ್ಧ ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀಚರಮೂರ್ತಿ ಮಠದಲ್ಲಿ ಬಸವ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಪಾದನಾ ಸ್ವಾಮೀಜಿ ಆಯೋಜಿಸಿದ್ದ ಲಿಂಗದೀಕ್ಷೆ ಅಯ್ಯಾಚಾರ ಕಾರ್ಯಕ್ರಮ ಶ್ಲಾಘನೀಯ ಎಂದರು.

ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿ, ಲಿಂಗದೀಕ್ಷೆ ಹೊಂದಿದವರು ಇಷ್ಟಲಿಂಗವನ್ನು ಸದಾ ಧರಿಸುವುದರಿಂದ ಪಂಚಸೂತಕ ಇರುವುದಿಲ್ಲ. ಅಷ್ಟಾವರಣಗಳಲ್ಲಿ ಬರುವ ಲಿಂಗವನ್ನು ಭಕ್ತರು ಗುರುಗಳ ಲಿಂಗ ಹಸ್ತದಿಂದ ಲಿಂಗಧಾರಣೆ ಮಾಡಿಕೊಂಡು ನಿತ್ಯ ಲಿಂಗಪೂಜೆಯಲ್ಲಿ ತೊಡಗಬೇಕು. ಲಿಂಗಪೂಜೆ ಜತೆಗೆ ಕಾಯಕ ಪೂಜೆಯೂ ನಡೆಯಬೇಕು. ನಿತ್ಯ ಮಾಡುವ ಕಾಯಕವನ್ನು ಮನಪೂರ್ವಕವಾಗಿ ಮಾಡಬೇಕು. ಕಾಯಕ ಮಾಡಿ ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ದಾಸೋಹಕ್ಕಾಗಿ ಮೀಸಲಿಡಬೇಕು ಎಂದು ತಿಳಿಸಿದರು.

ಸುಭಾಷ ಕವಲಾಪೂರೆ, ಸಂಜಯ ಹಿರೇಮಠ, ಶೇಖರ ಚಿತ್ತವಾಡಗಿ, ಮಂಜು ರೊಟ್ಟಿ, ಮಹಾಂತೇಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net