ಲಿಂಗದಳ್ಳಿ ಗ್ರಾಮದಲ್ಲಿ ಮೊಸಳೆಗಳು ಪತ್ತೆ

MOSALE
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಾಟೋಳ್ಳಿ ಬಳಿ ಮಲಪ್ರಭಾ ನದಿ ದಡದಲ್ಲಿ ಶನಿವಾರ ಮೊಸಳೆಯೊಂದು ಕಂಡುಬಂದಿತು.
Published on

ಬೈಲಹೊಂಗಲ: ಸಮೀಪದ ಮಲಪ್ರಭಾ ನದಿ ದಡದ ಮಾಟೋಳ್ಳಿ ಮತ್ತು ಲಿಂಗದಳ್ಳಿ ಗ್ರಾಮದ ದಡದಲ್ಲಿ ಶನಿವಾರ ಮೊಸಳೆ ಪ್ರತ್ಯವಾಗಿ ಗ್ರಾಮಸ್ಥರನ್ನು ಬೆಚ್ಚೀಬಿಳಿಸಿದೆೆ. ಮಾಟೊಳ್ಳಿ ಗ್ರಾಮದಲ್ಲಿ ದೊಡ್ಡ ಮೊಸಳೆ ಮತ್ತು ಲಿಂಗದಳ್ಳಿ ಗ್ರಾಮದ ದಡದಲ್ಲಿ ಎರಡು ಮೊಸಳೆ ಹಾಗೂ ಮರಿಗಳನ್ನು ಕಂಡು ಗ್ರಾಮಸ್ಥರು ಭಯಗೊಂಡಿದ್ದಾರೆ. ನೇಸರಗಿ ಅರಣ್ಯ ಅಧಿಕಾರಿ ಬಸವರಾಜ ವಾಳದ ಮಾತನಾಡಿ, ಈ ಕುರಿತು ಕ್ರಮ ಜರುಗಿಸಲಾಗುವುದು, ಜನತೆ ನದಿ ದಡದ ಸಮೀಪ ತೆರಳಬಾರದು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net