ಲಿಂ.ಮಾತಾಜಿ ಆಶಯಕ್ಕೆ ವಿರುದಟಛಿ ಗಂಗಾದೇವಿ ಕರ‍್ಯನಿರ್ವಹಣೆ

bdr5
ಸಿದ್ಧರಾಮೇಶ್ವರ ಸ್ವಾಮೀಜಿ ಮಾಡಿರುವ ನಕಲಿ ಸಹಿಯನ್ನು ಬಸವದಳ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ ಬಸವಕಲ್ಯಾಣದಲ್ಲಿ ಬುಧವಾರ ಮಾಧ್ಯಮದವರ ಮುಂದೆ ತೋರಿಸಿದರು.
Published on

ಬಸವಕಲ್ಯಾಣ: ಪೂಜ್ಯ ಲಿಂಗೈಕ್ಯ ಡಾ.ಮಾತೆ ಮಹಾದೇವಿ ಆಶಯಕ್ಕೆ ವಿರುದ್ಧವಾಗಿ ಬಸವಧರ್ಮ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಷ್ಟಿçÃಯ ಬಸವದಳ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಶಿವಪುರ ಆರೋಪಿಸಿದರು.

ಪೂಜ್ಯಮಾತೆ ಮಹಾದೇವಿ ಅನೇಕ ಸಂಕಲ್ಪಗಳೊAದಿಗೆ ಕಲ್ಯಾಣಕ್ಕೆ ಆಗಮಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇಲ್ಲಿನ ಗವಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿಯಲ್ಲಿ ಡಾ.ಮಾತೆ ಮಹಾದೇವಿ ಕಟ್ಟಿದ ಸಂಸ್ಥೆಯನ್ನು ಗಂಗಾ ಮಾತಾಜಿ ರಕ್ತ ಸಂಬAಧಿಕರಿಗೆ ನೀಡಿದ್ದು ನಿಯಮಬಾಹಿರ. ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಕುತಂತ್ರದಿAದ ಗಂಗಾ ಮಾತಾಜಿ ಅವರು ಶ್ರೀ ಚನ್ನಬಸವಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಮಾತೆ ಸತ್ಯಾದೇವಿ ಇತರ ಪೂಜ್ಯರನ್ನು ಬಸವ ಧರ್ಮ ಪೀಠದಿಂದ ಹೊರಹಾಕಿದ್ದಾರೆ ಎಂದು ಕಿಡಿಕಾರಿದರು.

ಕೆಲ ದಾಖಲೆಗಳ ಮೇಲೆ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಚನ್ನಬಸವಾನಂದ ಶ್ರೀಗಳ ನಕಲಿ ಸಹಿ ಮಾಡಿದ್ದು ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗಗೊAಡಿದೆ. ಈ ಕುರಿತು ನಾವು ಸಿದ್ಧರಾಮೇಶ್ವರ ಸ್ವಾಮೀಜಿ ವಿರುದ್ಧ ಕೇಸ್ ದಾಖಲಿಸಿದ್ದರಿಂದ ಇನ್ನೂ ಬೇಲ್‌ನಲ್ಲಿದ್ದಾರೆ. ಒಟ್ಟಾರೆ ಬಸವ ಧರ್ಮ ಪೀಠ ಹಾಳಾಗಲು ಪೂಜ್ಯ ಸಿದ್ಧರಾಮೇಶ್ವರ ಸ್ವಾಮೀಜಿ ನೇರ ಕಾರಣ ಎಂದು ಹರಿಹಾಯ್ದರು.

ಲಿಂಗಾಯತ ಧರ್ಮ ಮಹಾಸಭಾ ರಾಷ್ಟಿçÃಯ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ ಮಾತನಾಡಿ, ಬಸವ ಮಹಾಮನೆಯಲ್ಲಿರುವ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಗಂಗಾ ಮಾತಾಜಿ ಹಾಗೂ ಕೆಲ ಭಕ್ತರನ್ನು ಮುಂದೆ ಇಟ್ಟುಕೊಂಡು ಜಗಳ ಹಚ್ಚುತ್ತಿದ್ದಾರೆ. ಬಸವಧರ್ಮ ಪೀಠದ ಆಸ್ತಿ ಲಪಟಾಯಿಸಲು ಹೊಂಚು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಓಂಪ್ರಕಾಶ ರೊಟ್ಟೆ, ಬಸವ ದಳದ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ್ ಹಾವಗೇರಿ, ಗೌರವಾಧ್ಯಕ್ಷ ವಸಂತರಾವ ಬಿರಾದಾರ, ಮಲ್ಲಿಕಾರ್ಜುನ ಶಾಪೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net