ಲಿಂ.ಗಂಗಾಧರ ಶ್ರೀಗಳ ಕೊಡುಗೆ ಅಪಾರ

26gpb1
ಶಿರಡಾಣದ ಡಾ.ಗಂಗಾಧರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಡಾ.ಮೂಜಗಂ ಪುಣ್ಯಸ್ಮರಣೆ ಆಚರಿಸಲಾಯಿತು. ಮಲ್ಲಿಕಾರ್ಜುನ ಶ್ರೀ, ಕಮತನಹಟ್ಟಿ ಶ್ರೀ, ಶಿವಬಸವ ಶ್ರೀ, ಚೆನ್ನಬಸವ ದೇವರು ಮತ್ತಿತರರು ಇದ್ದರು.
Published on

ಘಟಪ್ರಭಾ: ಹತ್ತೊಂಬತ್ತನೇ ಶತಮಾನದ ಮಹಾನ್ ಶರಣ, ಶರಣ ತತ್ತ್ವದ ಅರಿವು ಮೂಡಿಸಿದ ಹಾನಗಲ್ ಕುಮಾರೇಂದ್ರ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ನಗರವನ್ನು ವಿದ್ಯಾನಗರವನ್ನಾಗಿ ಮಾಡಿದ್ದು ಲಿಂ.ಗಂಗಾಧರ ಮಹಾಸ್ವಾಮಿಗಳು ಎಂದು ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧ್ಯಕ್ಷ, ಡಾ.ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯ ಚೇರ್ಮನ್ ಮಲ್ಲಿಕಾರ್ಜುನ ಶ್ರೀ ಹೇಳಿದರು.

ಅವರು ಡಾ.ಮೂಜಗಂ ಅವರ 19ನೇ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಡಾ.ಗಂಗಾಧರ ಆಂಗ್ಲ ಮಾಧ್ಯಮ ಶಾಲೆ, ಶಿರಡಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಜಗಂ ಅವರು ಸ್ಥಾಪಿಸಿದ ಮಠಗಳು, ಆರೋಗ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಮಂದಿರಗಳು ಅಜರಾಮರವಾಗಿವೆ ಎಂದರು. ಕಮತನಟ್ಟಿ ಗುರುದೇವರು ಶ್ರೀಗಳು, ಹುಕ್ಕೇರಿ ವಿರಕ್ತಮಠದ ಶಿವಬಸವ ಶ್ರೀ ಮಾತನಾಡಿದರು. ಕಾರಂಜಿಮಠದ ಡಾ.ಶಿವಯೋಗಿ ದೇವರು, ಅಕ್ಕಲಕೋಟೆಯ ಚೆನ್ನಬಸವ ದೇವರು, ಘೋಡಗೇರಿ ಶಿವಾನಂದ ದೇವರು, ನಿರ್ದೇಶಕರಾದ ಡಾ.ವಿರೂಪಾಕ್ಷ ಪತ್ತಾರ, ರಾಜು ಕತ್ತಿ, ಕೆ.ಎಲ್. ಪಾಟೀಲ, ಮಾರುತಿ ಪಾಟೀಲ, ವಂದನಾ ಕತ್ತಿ, ಅರಸಿಕೆರೆಯ ಎಸ್.ಎಸ್. ಮಲ್ಲನವರ, ಎಲ್.ಸಿ.ಮೊಹರೆ, ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸುಭಾಷ ಭರಮರಾಹುತ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net