ಲಾರಿಗೆ ಬೈಕ್​ ಡಿಕ್ಕಿಯಾಗಿ ಸವಾರ ಸಾವು

accident-15
Published on

ಚಿಕ್ಕೋಡಿ: ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಹುಕ್ಕೇರಿ ತಾಲೂಕಿನ ಎಲ್ಲಿಮುನ್ನೊಳ್ಳಿ ಗ್ರಾಮದ ನಿವಾಸಿ ರಾಹುಲ್​ ಶಾಂತಿನಾಥ ಶಾಹ (25) ಮೃತಪಟ್ಟಿರುವ ಟನೆ ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದ ಬಳಿ ಸಂಕೇಶ್ವರ&ಗೋಕಾಕ ರಸ್ತೆಯಲ್ಲಿ ಶುಕ್ರವಾರ ರಾತ್ರಿನಡೆದಿದೆ. ಸಂಕೇಶ್ವರ ಕಡೆಯಿಂದ ಹುಕ್ಕೇರಿ ಕಡೆಗೆ ಬೈಕ್​ ಮೇಲೆ ಸಂಚರಿಸುತ್ತಿದ್ದಾಗ ನೇರಲಿ ಸಮೀಪದ ತೂಗು ಸೇತುವೆ ಬಳಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಠಾಣೆ ಪೊಲೀಸ್​ರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net