ಲಾರಿಗೆ ಗೂಡ್ಸ್ ಆಟೋ ಡಿಕ್ಕಿ, ಇಬ್ಬರು ದುರ್ಮರಣ

Published on

ಚಾಮರಾಜನಗರ: ಬೆಳೆದ ಟೊಮ್ಯಾಟೊ ತುಂಬಿಕೊಂಡು ಮಾರುಕಟ್ಟೆಗೆ ಹೋಗುವ ದಾರಿಮಧ್ಯೆ ಲಾರಿಗೆ ಆಟೋ ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲಿ ಇಬ್ಬರು ಧಾರುಣವಾಗಿ ಮೃತಪಟ್ಟಿದ್ದಾರೆ.

ತಾಲೂಕಿನ ಉಮ್ಮತ್ತೂರು ಗ್ರಾಮದ ಆಟೋ ಚಾಲಕ ಸುಮಂತ್ (22) ಮತ್ತು ಟೊಮ್ಯಾಟೊ ಬೆಳೆದಿದ್ದ ಅಗ್ರಹಾರದ ನಿತಿನ್ ಕುಮಾರ್ (16) ಮೃತ ದುರ್ದೈವಿಗಳು. ಇವರು ಬುಧವಾರ ಬೆಳಗ್ಗೆ ಟೊಮ್ಯಾಟೊ ತುಂಬಿದ ಆಟೋದಲ್ಲಿ ಕೊಳ್ಳೇಗಾಲ -ಯಳಂದೂರು ಮಾರ್ಗ ಮಧ್ಯದ ಎಳೆಪಿಳ್ಳಾರಿ ಗಣಪತಿ ದೇಗುಲದ ಬಳಿ ಹೋಗುತ್ತಿದ್ದಾಗ, ವಾಹನನಿಯಂತ್ರಣ ತಪ್ಪಿ ಕಬ್ಬು ತುಂಬಿಕೊಂಡು ರಸ್ತೆಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಈ ಸಂಬಂಧ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಅಗರ-ಮಾಂಬಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿದರು. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net