ಲಾರಿ ಹರಿದು ಬೈಕ್ ಸವಾರ ಮೃತ

Published on

ಬಳ್ಳಾರಿ : ಇಲ್ಲಿನ ಹೊಸಪೇಟೆ ರಸ್ತೆಯ ಅಲ್ಲಿಪುರ ಮಹಾದೇವ ದೇವಸ್ಥಾನದ ಬಳಿ ಬೈಕ್ ಮೇಲೆ ಲಾರಿ ಹರಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಕಂಪ್ಲಿ ತಾಲೂಕಿನ ಮುದ್ದಾಪುರ ನಿವಾಸಿ ಹೊನ್ನಪ್ಪ (50) ಮೃತ. ಕುಡಿತಿನಿಯ ಯೂನಿಯನ್ ಬ್ಯಾಂಕ್‌ನಲ್ಲಿ ರಿಕವರಿ ಕೆಲಸ ಮಾಡುತ್ತಿದ್ದ. ಕುಡಿತಿನಿಯಿಂದ ಬಳ್ಳಾರಿಗೆ ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಲಾರಿ ಬೈಕ್ ಮೇಲೆ ಹರಿದಿದೆ. ಈ ಘಟನೆಯಿಂದಾಗಿ ರೊಚ್ಚಿಗೆದ್ದ ಸಾರ್ವಜನಿಕರು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net