

ಮುರಗೋಡ: ರಸ್ತೆ ಬದಿಗೆ ಹೋಗುತ್ತಿದ್ದ ಕುರಿ ಹಿಂಡಿನ ಮೇಲೆ ಮರಳು ತುಂಬಿದ ಲಾರಿ ಹರಿದು ಸ್ಥಳದಲ್ಲೇ 9 ಕುರಿ ಮೃತಪಟ್ಟು, 11ಕ್ಕೂ ಅಧಿಕ ಕುರಿಗಳು ಗಾಯಗೊಂಡ ಟನೆ ಬೈಲಹೊಂಗಲ&ಮುನವಳ್ಳಿ ಮುಖ್ಯರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ.
ಮುನವಳ್ಳಿ ತಾಲೂಕಿನ ಮಲ್ಲೂರ ಗ್ರಾಮದ ಕುರಿಗಾಹಿ ಸೋಮಪ್ಪ ಹಾದಿಮನಿ ಸೇರಿದ ಕುರಿಗಳು ಎನ್ನಲಾಗಿದೆ. ಸುಮಾರು 300ಕ್ಕೂ ಹೆಚ್ಚು ಕುರಿಗಳೂಂದಿಗೆ ಹಂಚಿನಾಳ ಗ್ರಾಮಕ್ಕೆ ಮೇಯಿಸಲು ಹೋಗುವ ವೇಳೆ ಮುನವಳ್ಳಿಯಿಂದ ಬೈಲಹೊಂಗಲಕ್ಕೆ ಸಂಚರಿಸುತ್ತಿದ್ದ ಮರಳು ತುಂಬಿದ ಲಾರಿ ಹರಿದು ಈ ಟನೆ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಲಾರಿ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮುನವಳ್ಳಿ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.