ಲಾರಿ ಹರಿದು 21 ಕುರಿಗಳ ಸಾವು

Kuri
Published on

ಚಿತ್ರದುರ್ಗ: ತಾಲೂಕಿನ ಜಾನುಕೊಂಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಕುರಿ ಹಿಂಡಿನ ಮೇಲೆ ವೇಗವಾಗಿ ಬಂದ ಲಾರಿಯೊಂದು ಹರಿದ ಪರಿಣಾಮ 21 ಕುರಿಗಳು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಶುಕ್ರವಾರ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ 17 ಕುರಿಗಳು ಹೊಳಲ್ಕೆರೆ ತಾಲೂಕಿನ ಅಮೃತಾಪುರ ಗ್ರಾಮದ ಶಿವಪ್ಪ, ಇನ್ನೂ ನಾಲ್ಕು ಅದೇ ಗ್ರಾಮದ ದೇವೇಂದ್ರಪ್ಪ ಎಂಬುವರಿಗೆ ಸೇರಿದ್ದಾಗಿವೆ.

ಕುರಿಗಳನ್ನು ಮೇಯಿಸಿಕೊಂಡು ಗ್ರಾಮಕ್ಕೆ ಹಿಂದಿರುಗುವ ವೇಳೆ ಜಾನುಕೊಂಡದ ಆಂಜನೇಯ ಸ್ವಾಮಿ ದೇಗುಲ ಬಳಿ ಘಟನೆ ನಡೆದಿದೆ.

ಚಾಲಕ ಮದ್ಯ ಸೇವನೆ ಅಮಲಿನಲ್ಲಿ ಲಾರಿ ಚಾಲನೆ ಮಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿ ತಿಪ್ಪೇಸ್ವಾಮಿ, ಹೊಳಲ್ಕೆರೆ ತಾಲೂಕು ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಂಗಸ್ವಾಮಿ ಕೂಡ ಪರಿಶೀಲಿಸಿದ್ದು, ಕುರಿ ಮಾಲೀಕರಿಗೆ 5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಿದ್ದಾರೆ. ಮೃತ ಕುರಿಗಳಲ್ಲದೆ, ಇನ್ನೂ 19 ಕುರಿಗಳು ಗಾಯಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net