ಲಾರಿ ಮಾಲೀಕರ ಸಂಘದ ಸುವರ್ಣ ಮಹೋತ್ಸವ

h6-ravindra belamkar
Published on

ಹುಬ್ಬಳ್ಳಿ: ಹು-ಧಾ ಸರಕು ಸಾಗಾಣಿಕೆದಾರರ ಹಾಗೂ ಲಾರಿ ಮಾಲೀಕರ ಸಂಘದ ಸುವರ್ಣ ಮಹೋತ್ಸವ ಸಮಾರಂಭ ಜ. 8ರಂದು ಬೆಳಗ್ಗೆ 11ಗಂಟೆಗೆ ನಗರದ ಡೆನಿಸನ್ಸ್ ಹೊಟೇಲ್​ನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ರವೀಂದ್ರ ಬೆಳಮಕರ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಚೇರ್ಮನ್ ಡಾ. ಜಿ. ಆರ್. ಷಣ್ಮುಗಪ್ಪ ಪಾಲ್ಗೊಳ್ಳುವರು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.

1971-72ರಲ್ಲಿ ಅಸ್ತಿತ್ವಕ್ಕೆ ಬಂದ ಸಂಘವು ಮೊದಲು ಹೋರಾಟ ಮಾಡಿದ್ದು ಅಂದು ಜಾರಿಯಲ್ಲಿದ್ದ ಅಕ್ಟ್ರಾಯ್ ವಿರುದ್ಧ. ಅನಿರ್ದಿಷ್ಟ ಅವಧಿಯ ಹೋರಾಟಕ್ಕೆ ಮಣಿದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಕ್ಟ್ರಾಯ್ ಪದ್ಧತಿಯನ್ನು ರದ್ದುಗೊಳಿಸಿದ್ದರು. ಬಳಿಕ ದೇಶದ ಎಲ್ಲ ರಾಜ್ಯಗಳು ಹಂತ ಹಂತವಾಗಿ ಅಕ್ಟ್ರಾಯ್ ಕೈ ಬಿಟ್ಟರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ವಾಸಪ್ಪ ಕೊನರಡ್ಡಿ, ಸಹ ಕಾರ್ಯದರ್ಶಿ ಪ್ರಕಾಶ ರಾಯ್ಕರ್, ಎಸ್.ಆರ್. ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net