ಲಾರಿ ಮಗುಚಿ ನಾಲ್ಕು ಹಸುಗಳು ಸಾವು

19 HANUR 2
ಬೋರೆದೊಡ್ಡಿ ಗ್ರಾಮದ ತಿರುವಿನಲ್ಲಿ ಲಾರಿ ಮಗುಚಿ ಹಸುಗಳು ಮೃತಪಟ್ಟ ಸ್ಥಳಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿ ವೈಯಕ್ತಿಕವಾಗಿ ಧನಸಹಾಯ ನೀಡಿದರು.
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಬೋರೆದೊಡ್ಡಿ ಗ್ರಾಮದ ತಿರುವಿನಲ್ಲಿ ಭಾನುವಾರ ಸಂಜೆ ಮರಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿ ಮಗುಚಿದ ಪರಿಣಾಮ ಮೇಯುತ್ತಿದ್ದ ಹಸುಗಳ ಮೇಲೆ ಬಿದ್ದು 4 ಜಾನುವಾರುಗಳು ಮೃತಪಟ್ಟಿವೆ.

ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಸಂಜೆ 6 ಗಂಟೆ ಸುಮಾರಿನಲ್ಲಿ ಮರಗಳನ್ನು ತುಂಬಿಕೊಂಡು ಲಾರಿ ತುಮಕೂರಿನ ಕಡೆಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಲಾರಿ ಬೋರೆದೊಡ್ಡಿ ಗ್ರಾಮದ ತಿರುವಿನಲ್ಲಿ ಮಗುಚಿದೆ. ಪರಿಣಾಮ ಜಮೀನಿನ ರಸ್ತೆ ಬದಿಯಲ್ಲಿ ಮೇಯುತ್ತಿದ್ದ ರಂಗಸ್ವಾಮಿ ಹಾಗೂ ಮಾದಯ್ಯ ಎಂಬುವರಿಗೆ ಸೇರಿದ ತಲಾ 2 ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ.

ನಾಗ ಎಂಬುವರಿಗೆ ಸೇರಿದ ಹಸುವಿಗೆ ಕಾಲು ಮುರಿದಿದೆ.

ಸುದ್ದಿ ತಿಳಿದು ಸ್ಥಳಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಿ.ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿ ಮೃತಪಟ್ಟ ಹಸುವಿನ ಮಾಲೀಕರಿಗೆ ವೈಯಕ್ತಿಕವಾಗಿ ತಲಾ 5 ಸಾವಿರ ರೂ. ಧನಸಹಾಯ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net