ಲಾರಿ ಪಲ್ಟಿಯಾಗಿ ಇಬ್ಬರು ಸಾವು

accident-15
Published on

ರಾಮದುರ್ಗ:

ತಾಲೂಕಿನ ಮುದಕವಿ ಗ್ರಾಮದ ಗುಡ್ಡದ ತಿರುವಿನಲ್ಲಿ ಭಾನುವಾರ ರಾತ್ರಿ ಸಕ್ಕರೆ ಚೀಲಗಳನ್ನು ತುಂಬಿದ್ದ ಲಾರಿ ಬಿದ್ದು ಇಬ್ಬರು ಮೃತಪಟ್ಟು, ಚಾಲಕ ಸೇರಿ ನಾಲ್ವರು ಗಾಯಗೊಂಡ ಟನೆ ಸಂಭವಿಸಿದೆ.

ಹಲಗತ್ತಿ ಗ್ರಾಮದ ಬಾಲಪ್ಪ ತಿಮ್ಮಣ್ಣ ಮುದಕವಿ (28) ಸ್ಥಳದಲ್ಲೇ ಮೃತಪಟ್ಟರೆ, ಯಲ್ಲವ್ವ ಉಮೇಶ ಹುಚ್ಚನ್ನವರ (38) ಚಿಕಿತ್ಸೆ ಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲಗತ್ತಿ ಗ್ರಾಮದ ಮಂಜುಳಾ ತಿಮ್ಮಣ್ಣ ಮುದಕವಿ (47), ರುಕ್ಮವ್ವ ಖಾನಪ್ಪ ಗಿಡ್ಡನ್ನವರ (68), ಗುತ್ತಿಗೋಳಿ ಹೊಸಕೋಟಿ ಗ್ರಾಮದ ಉಮೇಶ ಯಂಕಪ್ಪ ಹುಚ್ಚನ್ನವರ (45) ತೀವ್ರ ಗಾಯಗೊಂಡಿದ್ದು, ರಾಮದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಲೆ ಆರೋಪ:

ಲಾರಿ ಚಾಲಕ, ಬೀಳಗಿಯ ಧನುಷ್​ ಸೋಮಪ್ಪ ಚವ್ಹಾಣ ಕುಳಗೇರಿ ಕ್ರಾಸ್​ನಿಂದ ರಾಮದುರ್ಗ ಮಾರ್ಗವಾಗಿ ವೇಗವಾಗಿ ಲಾರಿ ಓಡಿಸಿ ಅಪಘಾತಗೊಳಿಸಿ ಇಬ್ಬರನ್ನು ಕೊಲೆ ಮಾಡಿ, ಇತರರನ್ನು ಗಾಯಗೊಳಿಸಿದ್ದಾನೆ ಎಂದು ಮೃತರ ಸಂಬಂಧಿ, ಹಲಗತ್ತಿ ಗ್ರಾಮದ ತಿಮ್ಮಣ್ಣ ಬಾಲಪ್ಪ ಮುದಕವಿ ರಾಮದುರ್ಗ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್​ ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಲಿದೆ. ರಾಮದುರ್ಗ ಪಿಎಸ್​ಐ ಸವಿತಾ ಮುನ್ಯಾಳ, ಸಿಪಿಐ ಐ.ಆರ್​. ಪಟ್ಟಣಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ರಾಮದುರ್ಗ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10&ಬಿಜಿವಿ&ಆರ್​ಎಎಂ&3

ಸಕ್ಕರೆ ತುಂಬಿದ್ದ ಲಾರಿ ಮುದಕವಿ ತಿರುವಿನಲ್ಲಿ ಪಲ್ಟಿಯಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net