

ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಾಣಿಕೆ ವಾಹನವೊಂದು ಉರುಳಿ ಬಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ತಾಲೂಕಿನ ಕುಳ್ಳೂರು ಕ್ರಾಸ್ ಸಮೀಪ ಸೋಮವಾರ ಕೇರಳ ಮೂಲದ ಲಾರಿಯೊಂದು ತಮಿಳುನಾಡಿಗೆ ಸರಕು ಸಾಗಾಣಿಕೆ ಮಾಡುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದಿದೆ. ವಾಹನ ಉರುಳಿದ ಪರಿಣಾಮ ರಘುಪತಿ ಮತ್ತು ದಾಮೋದರ್ ಎಂಬುವವರಿಗೆ ಪೆಟ್ಟಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗಾಯಾಳುಗಳನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲುಮಾಡಿದ್ದಾರೆ.