ಲಾರಿ ಡಿಕ್ಕಿ ಬೈಕ್ ಹಿಂಬದಿ ಸವಾರ ಸಾವು

Bike Accident
Published on

ಮೈಸೂರು: ಬೆಳವಾಡಿ ಕೈಗಾರಿಕಾ ಪ್ರದೇಶದಲ್ಲಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಮೃತಪಟ್ಟಿದ್ದಾರೆ.

ಇಲವಾಲದ ಚಿಕ್ಕೇಗೌಡನ ಕೊಪ್ಪಲು ನಿವಾಸಿ ಕೆ.ಗುರುಪ್ರಸಾದ್ (35) ಮೃತರು. ಇವರು ಮಂಗಳವಾರ ರಾತ್ರಿ ಅದೇ ಗ್ರಾಮದ ರಮೇಶ್ ಅವರೊಂದಿಗೆ ಬೈಕ್‌ನಲ್ಲಿ ತೆರಳಿದ್ದರು.

ಈ ಸಂದರ್ಭದಲ್ಲಿ ಬೆಳವಾಡಿ ಚೆಕ್ ಪೋಸ್ಟ್ ಕಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಗುರುಪ್ರಸಾದ್ ನೆಲಕ್ಕೆ ಬಿದ್ದು, ಮುಖ, ಎಡಗಾಲಿಗೆ ಗಾಯವಾಗಿತ್ತು. ಮೇಲ್ನೋಟಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಗುರುಪ್ರಸಾದ್ ಅವರಿಗೆ ಚಿಕಿತ್ಸೆ ನೀಡದೆ ಮನೆಗೆ ಕರೆದೊಯ್ದಿದ್ದರು.

ಬುಧವಾರ ಬೆಳಗ್ಗೆ ಅವರು ಎದ್ದೇಳದಿದ್ದಾಗ, ಕುಟುಂಬದವರು ಕೆ.ಆರ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net