

ಹಾಸನ: ಬುಲೆರೋ ವಾಹನಕ್ಕೆ ಲಾರಿ ಡಿಕ್ಕಿಯಾಗಿ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಅರಸೀಕೆರೆ ಪಟ್ಟ್ಣದ ಅರಸೀಕೆರೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನಡೆದಿದೆ.
ತಾಲ್ಲೂಕಿನ ಗಂಡಸಿ ಹೋಬಳಿ ವೆಂಕಾಟಪುರ ಕಾವಲು ಗ್ರಾಮದ ಎಂ.ಆರ್.ಚಿಕ್ಕೇಗೌಡ (46) ಮೃತರು. ಮುದುಡಿ ಸಿದ್ದಾಪುರ ಗ್ರಾಮದ ಅಭಿಜಿತ್, ಹೊಳೇನರಸೀಪುರ ತಾಲ್ಲೂಕು ಹಳೇಕೋಟೆ ಹೋಬಳಿ ಬಿಟ್ಟಗೌಡನಹಳ್ಳಿ ಗ್ರಾಮದ ಮಧುಸೂಧನ (34) ಇವರ ಪತ್ನಿ ರತ್ನಕುಮಾರಿ (30) ಗಾಯಾಳುಗಳು.
ಮಂಗಳವಾರ ಸಂಜೆ 7.30ರ ವೇಳೆ ಬುಲೆರೋ ವಾಹನದಲ್ಲಿ ಅರಸೀಕೆರೆ-ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ಅರಸೀಕೆರೆ ಕಡೆಯಿಂದ ಗಂಡಸಿ ಕಡೆಗೆ ಹೋಗುತ್ತಿದ್ದ ವೇಳೆ ಗಂಡಸಿ ಕಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬುಲೆರೋ ವಾಹನ ಜಖಂಗೊಂಡ ನಾಲ್ವರು ಗಾಯಗೊಂಡಿದ್ದು ಅವರನ್ನ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ ಎಂ.ಆರ್.ಚಿಕ್ಕೇಗೌಡ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹಾಸನಕ್ಕೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ಅರಸೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.