ಲಾರಿ ಟ್ಯಾಂಕ್‌ನಲ್ಲಿನ ಡಿಸೇಲ್ ಕಳ್ಳತನ

Crime Logo
Published on

ಕಲಬುರಗಿ: ಜೇವರ್ಗಿ ರಸ್ತೆಯಲ್ಲಿನ ಶಹಾಬಾದ್ ಕ್ರಾಸ್ ಬಳಿ ಪೆಟ್ರೋಲ್ ಬಂಕ್ ಒಂದರ ಬಳಿ ರಾತ್ರಿ ನಿಲ್ಲಿಸಿದ ಸಿಮೆಂಟ್ ಲಾರಿ ಟ್ಯಾಂಕ್‌ನಲ್ಲಿನ ೩೫೫ ಲೀಟರ್ ಡೀಸೆಲ್ ಕಳ್ಳತನ ಮಾಡಿದ ಘಟನೆ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿ ಗ್ರಾಮದ ಚಾಲಕ ಸಿರೇಪ್ಪ ಪೂಜಾರಿ ದೂರು ನೀಡಿದ್ದಾರೆ. ರಾಜಸ್ಥಾನ ವೀರಸಿಂಗ್ ಲಾರಿ ಮಾಲಿಕನಾಗಿದ್ದಾರೆ. ಚಿತ್ತಾಪುರದ ಓರಿಯಂಟ್ ಫ್ಯಾಕ್ಟರಿಯಿಂದ ಸಿಮೆಂಟ್ ತುಂಬಿಕೊAಡು, ಚಿತ್ತಾಪುರದ ಪೆಟ್ರೋಲ್ ಬಂಕ್‌ನಲ್ಲಿ ೩೬೨ ಲೀಟರ್ ಡಿಸೇಲ್ ತುಂಬಿಸಿಕೊAಡಿದ್ದಾನೆ. ನಂತರ ಮಹಾರಾಷ್ಟçದ ಸತಾರ್‌ಗೆ ಹೋಗುವಾಗ ಮಾರ್ಗಮಧ್ಯೆ ಜೇವರ್ಗಿ ರಸ್ತೆಯ ಬಂದಳ್ಳಿ ಪೆಟ್ರೋಲ್ ಬಂಕ್ ಬಳಿ ರಾತ್ರಿ ಲಾರಿ ನಿಲ್ಲಿಸಿ, ಮಲಗೊಂಡಿದ್ದಾನೆ. ರಾತ್ರಿ ಮೂರು ಗಂಟೆಗೆ ಸದ್ದು ಬಂದಾಗ ಕೆಳಗಿಳಿದು ನೋಡಿದ್ದು, ಟ್ಯಾಂಕ್ ಒಡೆದು, ಡಿಸೇಲ್ ಕಳ್ಳತನ ಮಾಡಿದ್ದು ತಿಳಿದಿದೆ. ಟ್ಯಾಂಕ್ ಪೂರ್ಣ ಖಾಲಿಯಾಗಿದ್ದು, ೩೧ ಸಾವಿರ ರೂ. ಮೌಲ್ಯದ ೩೫೫ ಲೀಟರ್ ಡಿಸೇಲ್ ಕಳ್ಳತನವಾಗಿದೆ ಎಂದು ಫರಹತಾಬಾದ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net