ಲಾರಿ-ಟವೆರಾ ಡಿಕ್ಕಿ: ಇಬ್ಬರು ಕ್ರೀಡಾಪಟುಗಳ ಸಾವು

IMG-20210317-WA0041
Published on

ವಿಜಯಪುರ: ಕಬ್ಬಡ್ಡಿ ಹರಾಜು ಪ್ರಕ್ರಿಯೆಗೆ ಹೊರಟಿದ್ದ ಆಟಗಾರರಿದ್ದು ಕಾರು ಅಪಘಾತಕ್ಕೀಡಾಗಿದ್ದು ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಬುಧವಾರ ಬೆಳಗ್ಗೆ ಕೊಲ್ಹಾರ ತಾಲೂಕಿನ ರೋಣಿಹಾಳ ಬಳಿ ಈ ಅವಘಡ ಸಂಭವಿಸಿದೆ.

ಮೃತರನ್ನು ಮಹಾರಾಷ್ಟ್ರ ಮೂಲದ ಸೊಹೇಲ್ (22), ಮಹಾದೇವ (20) ಎಂದು ಗುರುತಿಸಲಾಗಿದೆ.

ತುಳಸಿಗೇರಿಯಲ್ಲಿ ನಡೆಯಲಿರುವ ಪ್ರೊಕಬ್ಬಡ್ಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿ ಕ್ರೀಡಾಪಟುಗಳು ಹೊರಟಿದ್ದರು.

ರೋಣಿಹಾಳ ಕ್ರಾಸ್ ಬಳಿ ಎದುರಿನಿಂದ ಬಂದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ. ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿ ಆರು ಜನ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಕೊಲ್ಹಾರ ಪೊಲೀಸರು ಭೇಟಿ ನೀಡಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net