ಲಾರಿ ಚಾಲಕನಿಗೆ ಜೈಲು

conviction
Published on

ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ,ಅಪರಾಧಿ ಟಿಪ್ಪರ್ ಲಾರಿ ಚಾಲಕನಿಗೆ ನ್ಯಾಯಾಲಯ ಶುಕ್ರ ವಾರ 11 ತಿಂಗಳ ಜೈಲು ಶಿಕ್ಷೆ ಹಾಗೂ 4200 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಸಿದ್ದೇಶ್ ಎಂಬುವರು 2021ಮೇ 28ರಂದು ತಮ್ಮ ತಾಯಿ ಶಿವಮ್ಮ ಹಾಗೂ ಪತ್ನಿ ರೂಪಾರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಬಸವೇಶ್ವರ ಆಸ್ಪತ್ರೆ ಬಳಿ ಅಪಘಾತವಾಗಿದ್ದು, ಸಿದ್ದೇಶ್ ಹಾಗೂ ಅವರ ತಾಯಿ ಶಿವಮ್ಮ ಮೃತಪಟ್ಟಿದ್ದರು. ಸಿದ್ದೇಶ್ ಪತ್ನಿ ರೂಪಾ ತೀವ್ರವಾಗಿ ಗಾಯಗೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬಡಾವಣೆ ಠಾಣೆ ಪಿಐ ಬಿ.ವಿ.ಪ್ರಕಾಶ್,ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಡಿ.ಮಮತಾ ಅವರು,ಅಪರಾಧಿ ಚಾಲಕ ಟಿ.ರವಿಗೆ ಜೈಲು,ದಂಡ ಹಾಗೂ ದಂಡ ಕಟ್ಟಲು ವಿಫಲವಾದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಸಿ.ಮಂಜುನಾಥ್ ವಾದಿಸಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net