ಲಾರಿ ಚಾಲಕನ ಕೊಲೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಗಂಗಾವತಿ ಮೂಲದ ಲಾರಿ ಚಾಲಕನೊಬ್ಬನನ್ನು ರಾಡಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಗಾಮನಗಟ್ಟಿ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಹೇಶ ಮಾಲೀಪಾಟೀಲ (27) ಮೃತ ಲಾರಿ ಚಾಲಕ. ಜೋಡಳ್ಳಿಯಿಂದ ಸ್ಮಾರ್ಟ್​ಸಿಟಿ ಯೋಜನೆ ಕಾಮಗಾರಿಗೆ ಈ ಯುವಕ ಮರಳು ಸಾಗಣೆ ಮಾಡುತ್ತಿದ್ದ. ಯಾವುದೋ ವಿಷಯಕ್ಕೆ ಗಲಾಟೆಯಾಗಿ ಮಹೇಶನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಲೆಮರೆಸಿಕೊಂಡವರ ಪತ್ತೆಗೆ ನವನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net