ಲಾರಿ ಚಾಲಕನ ಕಾಲಿನ ಮೂಳೆ ಮುರಿತ

TKE PALTI AAD
ಹಳಿಯೂರು ಬೈಪಾಸ್ ರಸ್ತೆಯಲ್ಲಿ ಲಾರಿ ಪಲ್ಟಿಯಾಗಿರುವುದು.
Published on

ತರೀಕೆರೆ: ಹಳಿಯೂರು ಬಳಿ ಚತುಷ್ಪಥ ರಸ್ತೆಯಲ್ಲಿ ಸರಕು ಸಾಗಣೆ ಲಾರಿ ಮತ್ತು ಬೋರ್‌ವೆಲ್ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸರಕು ಸಾಗಣೆ ಲಾರಿ ಪಲ್ಟಿಯಾಗಿದ್ದು, ಚಾಲಕನ ಕಾಲಿನ ಮೂಳೆ ಮುರಿದೆ.

ಹುಬ್ಬಳ್ಳಿ ಮೂಲದ ಸರಕು ಸಾಗಣೆ ಲಾರಿ ಚಾಲಕ ಬಸವರಾಜ್ (30) ಎಂಬಾತನ ಕಾಲಿನ ಮೂಳೆ ಮುರಿದಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಹಳಿಯೂರು ಬೈಪಾಸ್ ಬಳಿ ಚತುಷ್ಪಥ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಶಿವಮೊಗ್ಗ ಕಡೆ ಸಾಗಿದ್ದ ಸರಕು ಸಾಗಣೆ ಲಾರಿ ಮತ್ತು ಬೀರೂರು ಕಡೆ ಹೊರಟಿದ್ದ ಬೋರ್‌ವೆಲ್ ಲಾರಿ ನಡುವೆ ಅಪಘಾತವಾಗಿದೆ. ಸರಕು ಸಾಗಣೆ ಲಾರಿ ಮಗುಚಿ ಬಿದ್ದ ಪರಿಣಾಮ ಚಾಲಕನ ಕಾಲಿನ ಮೂಳೆ ಮುರಿದಿದ್ದು, ತಕ್ಷಣವೇ ಸ್ಥಳೀಯರು ಗಾಯಾಳವನ್ನು ಆಸ್ಪತ್ರೆಗೆ ಕರೆದೊಯ್ದರು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net