ಲಾರಿ ಚಾಲಕನ ಕಾಲಿಗೆ ಸುತ್ತಿಕೊಂಡಿದ್ದ ಹಾವು

09rajesh6
Published on

ಚಾಮರಾಜನಗರ: ಲಾರಿ ಚಲಾಯಿಸುವಾಗಿ ಚಾಲಕನ ಸುತ್ತಿಕೊಂಡಿದ್ದ ಹಾವನ್ನು ಸ್ನೇಕ್ ಮಂಜು ಅವರು ರಕ್ಷಣೆ ಮಾಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತವೂ ತಪ್ಪಿದೆ.

ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ಬಳಿ ಶುಕ್ರವಾರ ಅಕ್ಕಿ ಮೂಟೆ ತುಂಬಿದ್ದ ಲಾರಿಯನ್ನು ಚಾಲನೆ ಮಾಡಿಕೊಂಡು ಬರುವಾಗ ಚಾಲಕ ಸದ್ದಾಂ ಎಂಬುವವರ ಕಾಲಿಗೆ ಹಾವು ಸುತ್ತಿಕೊಂಡಿದೆ. ಈ ಸಮಯದಲ್ಲಿ ಚಾಲಕ ಸದ್ದಾಂ ಸಾಕಷ್ಟು ಗಾಬರಿಗೊಂಡಿದ್ದರೂ, ಎದುರಿಗೆ ಬರುತ್ತಿದ್ದ ಬಸ್ ಮತ್ತು ಕಾರಿಗೆ ಅಪಘಾತವಾಗುವುದನ್ನು ತನ್ನ ಸಮಯಪ್ರಜ್ಞೆಯಿಂದ ತಪ್ಪಿಸಿದ್ದಾನೆ.

ಬಳಿಕ ನಿಧಾನವಾಗಿ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿದ್ದಾನೆ. ಈ ವೇಳೆ ಹೆಗ್ಗವಾಡಿಪುರ ಗ್ರಾಮದ ಸ್ನೇಕ್ ಮಂಜು ಅವರು ಸ್ಥಳಕ್ಕೆ ಬಂದಿದ್ದು, ವಿಚಾರವನ್ನು ತಿಳಿದು ಲಾರಿಯ ಒಳಗೆ ಸೇರಿಕೊಂಡಿದ್ದ ಹಾವನ್ನು ರಕ್ಷಣೆ ಮಾಡಿದ್ದಾರೆ. ಲಾರಿ ಚಾಲಕ ಸದ್ದಾಂ ಮತ್ತು ಸ್ನೇಕ್ ಮಂಜು ಅವರ ಸಮಯ ಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net