ಲಾರಿ, ಕ್ಯಾಂಟರ್ ಡಿಕ್ಕಿ ತಾರಿಹಾಳದ ಇಬ್ಬರು ಸಾವು

snd 5-1 crime
Published on

ಸಿಂದಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಚಿಕ್ಕಸಿಂದಗಿ ಬೈಪಾಸ್​ನಲ್ಲಿ ಶನಿವಾರ ರಾತ್ರಿ ಲಾರಿ ಹಾಗೂ ಕ್ಯಾಂಟರ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಗ್ರಾಮದ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

ಹುಬ್ಬಳ್ಳಿ ತಾಲೂಕಿನ ತಾರಿಹಾಳದ ಹಣಮಂತ ಗುರುಪಾದ ಮೆಣಸಿನಕಾಯಿ (26) ಹಾಗೂ ಮೈಲಾರಿ ಮಡಿವಾಳಪ್ಪ ಆನಶೆಟ್ಟಿ (26) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅಪಘಾತದ ತೀವ್ರತೆಯಿಂದ ಕುಳಿತಲ್ಲಿಯೇ ಸಿಕ್ಕು ಬಿದ್ದಿದ್ದ ಕ್ಯಾಂಟರ್ ಚಾಲಕನ ಶವವನ್ನು ಹೊರ ತೆಗೆಯಲು ಪೊಲೀಸರು ಕೆಲಕಾಲ ಹರಸಾಹಸ ಮಾಡುವಂತಾಯಿತು.

ಶನಿವಾರ ತಡರಾತ್ರಿ ಕಲಬುರಗಿಯಿಂದ ವಿಜಯಪುರ ಕಡೆಗೆ ಹೊರಟಿದ್ದ ಲಾರಿ ಚಾಲಕ ಕಲ್ಲಪ್ಪ ಹಳೇಮನಿ ನಿರ್ಲಕ್ಷ್ಯನದಿಂದ ಈ ಅಪಘಾತ ನಡೆದಿದ್ದು, ಚಾಲಕನೂ ಗಂಭೀರವಾಗಿ ಗಾಯಗೊಂಡು, ಕಾಲು ಮುರಿದುಕೊಂಡಿದ್ದು ಆತನನ್ನು ರಾತ್ರಿಯೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸಿಂದಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net