ಲಾರಿ ಉರುಳಿ ಈದ್ಗಾ ಜಖಂ

15kglphoto2....
Published on

ಕೊಳ್ಳೇಗಾಲ: ಕಬ್ಬಿಣ ಸಾಮಗ್ರಿ ತುಂಬಿದ ಚಲಿಸುತ್ತಿದ್ದ ಲಾರಿಯೊಂದು ಮುಡಿಗುಂಡ ಸೇತುವೆ ಪಕ್ಕದ ಹಳ್ಳಕ್ಕೆ ಉರುಳಿದ ಪರಿಣಾಮ ಸ್ಥಳದಲ್ಲಿದ್ದ ಈದ್ಗಾ ಜಖಂಗೊಂಡಿದೆ.

ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದ ಮಹಮ್ಮದ್ ಹತೀಖ್ ಎಂಬುವರಿಗೆ ಸೇರಿದ ಲಾರಿ ಅಪಘಾತಕ್ಕೀಡಾಗಿದ್ದು, ಚಾಲಕ ಕೌದಳ್ಳಿ ಗ್ರಾಮದ ಶಿವು ಗಾಯಗೊಂಡಿದ್ದಾರೆ.
ತಮಿಳುನಾಡಿನಿಂದ ಹುಣಸೂರು ಕಡೆಗೆ ತೆರಳಲು ಕಬ್ಬಿಣದ ಹ್ಯಾಂಗರ್‌ಗಳನ್ನು ತುಂಬಿಕೊಂಡು ಮಂಗಳವಾರ ತಡರಾತ್ರಿ ಪಟ್ಟಣದ ಮುಡಿಗುಂಡ ಸೇತುವೆ ಬಳಿ ತಿರುವು ಪಡೆಯುವಾಗ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿದೆ. ಅವಘಡದಿಂದ ಸೇತುವೆ ಕೆಳಗಿರುವ ಈದ್ಗಾ ಜಖಂಗೊಂಡಿದೆ.

ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಗಾಯಗೊಂಡ ಚಾಲಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net