

ಗುಳೇದಗುಡ್ಡ: ಚಾಲುಕ್ಯರ ಕಾಲದಿಂದಲೂ ಲಾಯದಗುಂದಿ ಗ್ರಾಮಕ್ಕೆ ತನ್ನದೇ ಆದ ಇತಿಹಾಸವಿದ್ದು, ಯುವಕರು ಪರಂಪರೆ ಮುಂದುವರಿಸಬೇಕು ಎಂದು ಕಮತಗಿ-ಕೋಟೆಕಲ್ಲ ಶ್ರೀ ಹೊಳೆಹುಚ್ಚೇಶ್ವರ ಸ್ವಾಮಿಗಳು ಹೇಳಿದರು.
ಲಾಯದಗುಂದಿ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ 50ನೇ ವರ್ಷದ ಮಹಾರಥೋತ್ಸವದ ನಿಮಿತ್ಯ ಬುಧವಾರ ರಾತ್ರಿ ಆಯೋಜಿಸಿದ್ದ ಲಾಯ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.
ಧರ್ಮದ ಕಾರ್ಯ ನಡೆಸಲು ರಾಜಕೀಯ, ಜಾತಿ ಬಿಟ್ಟು ಬರಬೇಕು. ಹಿರಿಯರು ಹಾಕಿಕೊಟ್ಟ ಪರಂಪರೆ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಯುವಕರು ಆಸಕ್ತಿಯಿಂದ ಮುನ್ನಡೆಸಿಕೊಂಡು ಹೋಗುವ ಮೂಲಕ ಕಲೆ, ಸಂಪ್ರದಾಯ, ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕೆಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡಿ, ಲಾಯದಗುಂದಿ ಗ್ರಾಮಕ್ಕೆ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಇತಿಹಾಸವಿದೆ. ಲಾಯ ಉತ್ಸವದ ಮೂಲಕ ಚಾಲುಕ್ಯರ ಕಾಲದ ಇತಿಹಾಸದ ಪರಂಪರೆ ಜಿಲ್ಲೆಯ ಜನತೆಗೆ ಗೊತ್ತಾಗಿದೆ ಎಂದರು.
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಹಿಂದುಳಿದ ವರ್ಗದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಹೊಸಗೌಡರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಾನಪದ ಕವಿ ಸಿದ್ದಪ್ಪ ಬಿದರಿ ಮಾತನಾಡಿದರು.
ಮುರುಘಾಮಠದ ಕಾಶೀನಾಥ ಸ್ವಾಮಿಗಳು, ಅಭಿನವ ಕಾಡಸಿದ್ದೇಶ್ವರ ಸ್ವಾಮಿಗಳು, ಡಾ.ರಾಜೇಂದ್ರ ಶಿವಯೋಗಿಗಳು, ಶಿವಪ್ಪ ಮುತ್ಯಾ ಅಚನೂರ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸತ್ಯವ್ವ ಕುರಿ ಅಧ್ಯಕ್ಷತೆ ವಹಿಸಿದ್ದರು.
ಶಿವಪುತ್ರಪ್ಪ ಸಜ್ಜನ, ಮಹೇಶ ಬಿಜಾಪೂರ, ಈರಪ್ಪ ಸಜ್ಜನ, ರುದ್ರಪ್ಪ ಬೇನಾಳ, ಡಾ. ಟಿ.ಎನ್.ಗೋಡಿ, ಶೇಖರ ರಾಠೋಡ, ಜಿಂದೇಶಾ ಸಹಕಾರಿ ಸಂಘದ ಅಧ್ಯಕ್ಷ ಅನ್ವರಖಾನ ಪಠಾಣ, ಗ್ರಾಪಂ ಮಾಜಿ ಅಧ್ಯಕ್ಷ ಶರಣು ಸಜ್ಜನ, ಬಸವರಾಜ ಜಂಗಮರ, ಬಸವರಾಜ ಗೋನಾಳ, ನಾಗಪ್ಪ ಮಾಳವಾಡ, ಬಸವರಾಜ ಗೋಡಿ, ಸುಭಾಸ ಗುರುಶಾಂತನವರ, ಸಿದ್ದು ಬಂಡಿವಡ್ಡರ, ಸುಂದರ ಕುರಿ, ನಾಗರಾಜ ಗುಡಿಸಾಗರ, ಮಲ್ಲಪ್ಪ ಗೌಡ್ರ, ಈಶ್ವರಪ್ಪ ದಿಂಡಿ, ಶಿವಪುತ್ರಪ್ಪ ಚಿಲ್ಲಾಪೂರ, ಬಸವರಾಜ ಬಂಡಿವಡ್ಡರ, ಶಿವಪ್ಪ ಜಡಿ, ಬಾಬುಸಾಬ್ ಪಿಂಜಾರ, ಬಸವಂತಪ್ಪ ಕುಪ್ಪಸ್ತ, ರಾಮಣ್ಣ ಬಂಡಿವಡ್ಡರ, ರಮೇಶ ಬಂಡಿವಡ್ಡರ ಇದ್ದಾರೆ.
ತುಳಸಿಗೇರಿ ವಿದ್ಯಾರ್ಥಿಗಳ ಮಲ್ಲಗಂಭ ಪ್ರದರ್ಶನ, ಸಂದೀಪ ಅವರ ಜಾದುಗಾರ ಪ್ರದರ್ಶನ, ಬೀರಲಿಂಗೇಶ್ವರ ಕಲಾ ತಂಡದಿಂದ ಡೊಳ್ಳುಕುಣಿತ, ಗೊಂಬೆ ಕುಣಿತ, ವೈಷ್ಣವಿ ಗೂಳಿ, ಶಂಕರ ಮುಂದಿನಮನಿ, ಚಿದಾನಂದಸಾ ಕಾಟವಾ, ಬಸವರಾಜ ಸಿಂದಗಿಮಠ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.