

ಯರಗಟ್ಟಿ: ಅರವತ್ಮೂರು ವರ್ಷಗಳಿಂದ ಸಣ್ಣ ವ್ಯಾಪಾರಿಗಳು ಹಾಗೂ ರೆತರಿಗೆ ಸಾಲ ಒದಗಿಸುತ್ತ ಮುನ್ನಡೆಯುತ್ತಿರುವ ಯರಗಟ್ಟಿ ಅರ್ಬನ್
ಬ್ಯಾಂಕ್ ಪ್ರಗತಿಪಥದತ್ತ ಸಾಗುತ್ತಿದೆ ಎಂದು ಸಂದ ಅಧ್ಯ ಮಹಾಂತೇಶ ಜಕಾತಿ ಹೇಳಿದರು.
ಇಲ್ಲಿನ ಯರಗಟ್ಟಿ ಅರ್ಬನ್ ಬ್ಯಾಂಕಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಮುರಗೋಡದ ಲಿಂ. ಮಹಾಂತ ಶಿವಯೋಗಿಗಳ ಅಮೃತಹಸ್ತದಿಂದ ಪ್ರಾರಂಭವಾದ ನಮ್ಮ ಬ್ಯಾಂಕ್ ಠೇವಣಿ ಸಂಗ್ರಹಣೆ, ಸಾಲ ವಿತರಣೆ, ಲಾಭದ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಕಟಬಾಕಿ ಸಾಲದ ಪ್ರಮಾಣ ಇಳಿಕೆಯಾಗಿದೆ. ಈ ವರ್ಷ 54 ಲ ರೂ. ನಿವ್ವಳ ಲಾಭ ಪಡೆದಿದೆ. ಇದಕ್ಕೆ ಕಾರಣ ಬ್ಯಾಂಕ್ ಗ್ರಾಹಕರ ನಿಯಮಾನುಸಾರ ವ್ಯವಹಾರ ಹಾಗೂ ಸಿಬ್ಬಂದಿ ಪರಿಶ್ರಮ ಮುಖ್ಯವಾಗಿದೆ ಎಂದರು.
ಬ್ಯಾಂಕಿನ ಉಪಾಧ್ಯ ಎಚ್.ಎಸ್. ಗಂಗರಡ್ಡಿ, ನಿರ್ದೇಶಕರಾದ ಎಂ.ಡಿ. ಜಕಾತಿ, ಎಸ್.ಎಸ್. ಬಾಳಿ, ಸಿ.ಸಿ. ಹಾದಿಮನಿ, ಯು.ವಿ. ಇಟ್ನಾಳ, ಎಂ.ಜಿ. ತಾಂವಶಿ, ಬಿ.ಎಸ್. ತಡಸಲೂರ, ಎಸ್.ಬಿ. ಬೆಲ್ಲದ, ಬಿ.ಎಸ್. ಪಟ್ಟಣಶೆಟ್ಟಿ, ಎನ್. ಬಿ. ಚೌಡಪ್ಪನವರ, ಎಸ್.ಎ. ದಂಡೆನ್ನವರ, ಎ್.ಎಚ್. ಕಾಮೋಶಿ, ಎಸ್.ಎಸ್. ಯರಗಣವಿ,
ಆರ್.ಆರ್. ವಾಲಿ, ಆಡಳಿತ ಸಲಹೆಗಾರ ಬಿ.ಎಂ. ರಾಯರ, ವ್ಯವಸ್ಥಾಪಕ ಎಸ್. ಎ. ಮೊರಬದ, ಸಿಬ್ಬಂದಿ ಇತರರು ಇದ್ದರು.