ಲಾಭದಲ್ಲಿ ಕುರುಹಿನಶೆಟ್ಟಿ ಸೊಸೈಟಿ

5
Published on

ಮೂಡಲಗಿ: ಪಟ್ಟಣದ ಕುರುಹಿನಶೆಟ್ಟಿ ಅರ್ಬನ್​ ಕೋ-&ಆಪ್​ ಕ್ರೆಡಿಟ್​ ಸೊಸೈಟಿಯು 2023&24ನೇ ಆರ್ಥಿಕ ವರ್ಷಾಂತ್ಯದಲ್ಲಿ 4.93 ಕೋಟಿ ರೂ.ಲಾಭ ಗಳಿಸಿ ಮುನ್ನಡೆಯುತ್ತಿದೆ ಎಂದು ಸೊಸೆಟಿ ಅಧ್ಯ ಬಸವಣ್ಣಿ ಮುಗಳಖೋಡ ಹೇಳಿದರು.

ಇಲ್ಲಿನ ಕುರುಹಿನಶೆಟ್ಟಿ ಸೊಸೈಟಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 29ನೇ ವಾರ್ಷಿಕ ಸಭೆ ಅಧ್ಯತೆ ವಹಿಸಿ ಮಾತನಾಡಿದರು. ಸೊಸೈಟಿಯು ಸದ್ಯ 3.90 ಕೋಟಿ ರೂ. ಷೇರು ಬಂಡವಾಳ, 230.85 ಕೋಟಿ ರೂ. ಠೇವು, 269.40 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ವಿವಿಧ ೇತ್ರಗಳ ಜನರಿಗೆ 162.41 ಕೋಟಿ ರೂ. ಸಾಲ ನೀಡಿದೆ. ಪ್ರತಿ ವರ್ಷವೂ ಅಡಿಟ್​ನಲ್ಲಿ ಅ ಶ್ರೇಣಿ ಪಡೆದು ಗ್ರಾಹಕರ ವಿಶ್ವಾಸ ಕಾಯ್ದುಕೊಂಡಿದೆ ಎಂದರು.

ಸೊಸೈಟಿ ಪ್ರಧಾನ ಕಾರ್ಯದರ್ಶಿ ರಮೇಶ ವಂಟಗೂಡಿ ಪ್ರಾಸ್ತಾವಿಕ ಮಾತನಾಡಿದರು. ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ ಹಾಗೂ ರಾಮದುರ್ಗ ಶಾಖಾ ಸಲಹಾ ಸಮಿತಿ ಸದಸ್ಯ ಶಂಕ್ರಯ್ಯ ಹಿರೇಮಠ ಮಾತನಾಡಿದರು. ವಿವಿಧ ಇಲಾಖೆಗಳ ನಿವೃತ್ತರಿಗೆ ಸನ್ಮಾನ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು. ಸೊಸೈಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಸುಭಾಷ ಬೆಳಕೂಡ, ಇಸ್ಮಾಯಿಲ್​ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜಿ ಬೆಳಕೂಡ. ವಿಶಾಲು ಶೀಲವಂತ, ಉಮಾ ಬೆಳಕೂಡ, ಶಾಂತವ್ವ ಬೊರಗಲ್​, ಮಾಹಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್​ ಕೊಡತ, ಚಂದ್ರಕಾಂತ ಕೊಡತೆ, ಪ್ರಮೋದ ಯಲಬುರ್ಗಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net