

ಮೂಡಲಗಿ: ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಂವು 2023&24ನೇ ಸಾಲಿನಲ್ಲಿ 54.89 ಲ ರೂ. ಲಾಭ ಹೊಂದಿ ಪ್ರಗತಿ ಪಥದತ್ತ ಸಾಗಿದೆ. ಸಂದ ಷೇರುದಾರರಿಗೆ ಶೇ.5 ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಂದ ಅಧ್ಯ ಮಲ್ಲಪ್ಪ ಕಡಾಡಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 111ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು. 2738 ಷೇರುದಾರರಿಂದ 2.63 ಕೋಟಿ ರೂ. ಷೇರು ಬಂಡವಾಳ, 5.20 ಕೋಟಿ ರೂ. ನಿಧಿ, 6.44 ಕೋಟಿ ರೂ. ಗುಂತಾವಣೆ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಸಂದ 1449 ಸದಸ್ಯರಿಗೆ 15.88 ಕೋಟಿ ರೂ. ಬೆಳೆಸಾಲ, 22.86 ಲ ರೂ. ಟ್ರ್ಯಾಕ್ಟರ್ ಸಾಲ, 3.91 ಲ ರೂ. ಹೆನುಗಾರಿಕೆ ಸಾಲ ವಿತರಿಸಲಾಗಿದೆ. 2023&24ನೇ ಸಾಲಿನಲ್ಲಿ ಪತ್ತು ಮಂಜೂರಾತಿ ಪಡೆದು 16.40 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಸಂದ ಸಿಇಒ ಬಸವರಾಜ ಬಾಗೇವಾಡಿ ವಾರ್ಷಿಕ ವರದಿ ಓದಿದರು. ಸಂದ ಉಪಾಧ್ಯ ಸಿದ್ದಪ್ಪ ವ್ಯಾಪಾರಿ, ನಿರ್ದೇಶಕರಾದ ಬಸವರಾಜ ಬೆಳಕೂಡ, ಬಾಳಪ್ಪ ಕಂಕಣವಾಡಿ, ಪರಪ್ಪ ಪಾಟೀಲ, ಈರಪ್ಪ ಹೆಬ್ಬಾಳ, ಬಸವಂತ ದಾಸನವರ, ಕೆಂಪವ್ವ ಗೋರೋಶಿ, ಪಾರ್ವತೆವ್ವ ಖಾನಗೌಡ್ರ, ಯಮನಪ್ಪ ಗೋಕಾಂವಿ, ಧರ್ಮಣ್ಣ ನಂದಿ, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ವಸಂತ ತಹಶೀಲದಾರ, ಅಕೌಂಟಂಟ್ ಮಲ್ಲಪ್ಪ ಹೆಬ್ಬಾಳ ಇತರರಿದ್ದರು.