

ಚಿಕ್ಕೋಡಿ, ಬೆಳಗಾವಿ: ಸಹಕಾರಿ ಸಂಘದ ಸದಸ್ಯರ ವಿಶ್ವಾಸರ್ಹತೆಯಿಂದ, ಸಂಸ್ಥೆಯು ಪ್ರಗತಿಯತ್ತ ಸಾಗುತ್ತಿದೆ ಎಂದು ಸಿದ್ಧಿವಿನಾಯಕ ಹಾಗೂ ಸಿದ್ದಿಪ್ರಿಯ ಮಹಿಳಾ ಸಹಕಾರಿ ಸಂಸ್ಥೆಯ ಅಧ್ಯಕ್ಷ ಸಂಜಯ ವಾಸುದೇವ ಅಡಕೆ ಹೇಳಿದರು.
ಗರದ ಕೇಶವ ಕಲಾಭವನದಲ್ಲಿ ಈಚೆಗೆ ಆಯೋಜಿಸಿದ್ದ ಸಿದ್ಧಿವಿನಾಯಕ ಸೌಹಾರ್ದ ಕ್ರೆಡಿಟ್ ಸಹಕಾರಿಯ 20ನೇ ವಾರ್ಷಿಕ ಸರ್ವಸಾಧಾರಣ ಸಭೆ ಮತ್ತು ಸಿದ್ಧಿಪ್ರಿಯಾ ಮಹಿಳಾ ಸೌಹಾರ್ದ ಸಹಕಾರಿಯ 4ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 71.78 ಕೋಟಿ ರೂ.ಠೇವಣಿ ಸಂಗ್ರಹಿಸಿ 57.48 ಕೋಟಿ ರೂ.ಸಾಲ ವಿತರಿಸಿದೆ. 87.93 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದರು. ತಾತ್ಯಾಸಾಹೇಬ ಪಾಟೀಲ, ಆನಂದ ಚೌಗಲಾ, ಅಕ್ಷತಾ ಕೋಳಿ, ಉಪಾಧ್ಯಕ್ಷ ಕೃಷ್ಣಾ ಭೋಸಲೆ, ನಿರ್ದೇಶಕ ಸುಜಿತ್ ದೀಕ್ಷಿತ, ಕಾರ್ಯದರ್ಶಿ ಸಪ್ನಾ ಸಂಕಪಾಳ, ಶ್ರೀಕಾಂತ ಕುಲಕರ್ಣಿ, ಅಪ್ಪಾಸಾಹೇಬ ಚವ್ಹಾಣ, ಗೋವಿಂದ ಅಡಕೆ, ಸದಾಶಿವ ಮಾಳಿ, ಆನಂದ ಕುಂಬಾರ, ಸುಧಾ ದೀಕ್ಷಿತ, ನಯನಾ ಹಿರೇಕೋಡಿ, ಅರುಣ ನೇರ್ಲಿ, ಸಿದ್ಧಿಪ್ರಿಯಾ ಸಂಸ್ಥೆಯ ಅಧ್ಯಕ್ಷ ನೀಲಮ್ ಸಂಜಯ ಅಡಕೆ, ಉಪಾಧ್ಯಕ್ಷ ದೀಪಾಲಿ ದೀಕ್ಷಿತ್, ನಿರ್ದೇಶಕಿ ರೂಪಾಲಿ ಚವ್ಹಾಣ, ಪ್ರಿಯಾಂಕಾ ಭೋಸಲೆ, ಭಾರ್ಗವಿ ಕುಲಕರ್ಣಿ, ರಾಜಶ್ರೀ ಕುಲಕರ್ಣಿ, ಸುಧಾ ಬಸವ, ವೈಶಾಲಿ ಮೇದಾರ, ರೇಖಾ ರಾಮನಕಟ್ಟಿ, ವೀಣಾ ಕುಲಕರ್ಣಿ, ಭಾರತಿ ಅಡಕೆ, ಹಣಮಂತ ಮಡಿವಾಳರ ಇತರರಿದ್ದರು.