

ಯಕ್ಸಂಬಾ, ಬೆಳಗಾವಿ: ಪಟ್ಟಣದ ಶ್ರೀ ಬಸವೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ 22.49 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಾರುತಿ ಭೀಮಾ ಮಾನೆ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 74ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಂಘ ರೈತರ ಮತ್ತು ಗ್ರಾಹಕರ ಸ್ನೇಹಿಯಾಗಿರಲು ಬಯಸುತ್ತದೆ. 2021-22ನೇ ಸಾಲಿನಲ್ಲಿ 2.13 ಕೋಟಿ ರೂ. ಹೊಂದಿದ್ದು , 1.15 ಕೋಟಿ ರೂ.ಷೇರು ಬಂಡವಾಳ ಹೊಂದಿದೆ ಎಂದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಯಾವುದೇ ಸಂಘ ಬೆಳೆಯಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು. ಸಂಘದ ಕಾರ್ಯದರ್ಶಿ ಗಣಪತಿ ಚಿನಮನಿ ವರದಿ ಓದಿದರು. ಮಹಾದೇವ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಕರಾಳೆ, ಶಿವಗೌಡ ಪಾಟೀಲ, ಸುಭಾಷ ಕಲ್ಯಾಣಿ, ಎ.ಡಿ. ಇಂಗಳೆ, ಅಂಕುಶ ಖೋತ, ಗಣಪತಿ ಮಾಳಿ, ಶಿವಾಜಿ ಮಾನೆ, ಶಿವಕುಮಾರ ಬಾವಚೆ, ತಾನಾಜಿ ಹುಲ್ಲನ್ನವರ, ಸದಾಶಿವ ನಾಯಿಕ, ಶಿವಪ್ಪ ಮಾನೆ, ಕುಮಾರ ಖೋತ, ಗಜಾನನ ಕೋಳಿ ಸೇರಿ ಸಂಚಾಲಕರು, ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.