ಲಾಭದತ್ತ ಅರಿಹಂತ ಸಹಕಾರಿ ಸಂಘ

19HUK1
ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿ ವಾರ್ಷಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಅಭಿನವ ಮಂಜುನಾಥ ಶ್ರೀ, ಜಯಪಾಲ ಚೌಗಲಾ, ಶ್ರುತಿ ಪಾಟೀಲ, ಗಂಗವ್ವಾ ಪೂಜೇರಿ, ಪಿ.ಆರ್.ಚೌಗಲಾ, ಭರಮಪ್ಪ ಚೌಗಲಾ ಇದ್ದರು.
Published on

ಹುಕ್ಕೇರಿ: ತಾಲೂಕಿನ ಹುಲ್ಲೋಳಿ ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 4.32 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಲಾಭಾಂಶದಲ್ಲಿ ಶೇ.25 ವಿತರಿಸಲಾಗುವುದು ಎಂದು ರಾಷ್ಟ್ರೀಯ ಅಲ್ಪಸಂಖ್ಯಾತ ನಿಗಮದ ನಿರ್ದೇಶಕ ಧನ್ಯಕುಮಾರ ಗುಂಡೆ ಹೇಳಿದರು.

ಹುಲ್ಲೋಳಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಹಕಾರಿಯ 23ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸಹಕಾರಿ ಪ್ರಧಾನ ಕಾರ್ಯದರ್ಶಿ ಆನಂದ ಚೌಗಲಾ ಮಾತನಾಡಿ, ಪ್ರಧಾನ ಕಚೇರಿ ಸೇರಿ ಸಂಘ 10 ಶಾಖೆಗಳನ್ನು ಹೊಂದಿದ್ದು, 180 ಕೋಟಿ ರೂ. ಠೇವು ಇದೆ. 295 ಕೋಟಿ ರೂ. ವಹಿವಾಟು ನಡೆಸಿ, 132 ಕೋಟಿ ರೂ. ಸಾಲ ವಿತರಿಸಿದೆ. ಶೇ. 99 ಸಾಲ ವಸೂಲಾತಿ ಮಾಡಲಾಗಿದೆ ಎಂದರು.

ದಿ. ಸಚಿವ ಉಮೇಶ ಕತ್ತಿ ಮತ್ತು ಮರಣ ಹೊಂದಿದ ಬ್ಯಾಂಕಿನ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ನಿರ್ದೇಶಕರಾದ ಜಿನ್ನಪ್ಪ ಸಪ್ತಸಾಗರ ಹಾಗೂ ರವೀಂದ್ರ ಚೌಗಲಾ ಮಾತನಾಡಿದರು. ಆವಜೀಕರ ಆಶ್ರಮದ ಅಭಿನವ ಮಂಜುನಾಥ ಶ್ರೀ ಸಾನ್ನಿಧ್ಯ ವಹಿಸಿದ್ದರು. ಸಹಕಾರಿ ಅಧ್ಯಕ್ಷ ಜಯಪಾಲ ಚೌಗಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ರುತಿ ಪಾಟೀಲ, ಗ್ರಾಪಂ ಅಧ್ಯಕ್ಷೆ ಗಂಗವ್ವ ಪೂಜೇರಿ,ನಿರ್ದೇಶಕರಾದ ಪಿ.ಆರ್.ಚೌಗಲಾ, ಭರಮಪ್ಪ ಚೌಗಲಾ, ಬಸವರಾಜ ಪಾಟೀಲ, ಅಶೋಕ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಪುಷ್ಪಾ ಚೌಗಲಾ, ರಾಮಪ್ಪ ಗೋಟೂರಿ, ಭೂಪಾಲ ಚೌಗಲಾ, ಬಾಹುಬಲಿ ನಾಗನೂರಿ, ಜೆ.ಎಸ್.ಚೌಗಲಾ, ಬಿ.ಬಿ.ಚೌಗಲಾ, ಮಹಾವೀರ ಚೌಗಲಾ ಇತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net