ಲಾಭದ ಆಸೆ ತೋರಿಸಿ 8.5 ಲಕ್ಷ ರೂ. ಆನ್‌ಲೈನ್ ವಂಚನೆ

ಲಾಭದ ಆಸೆ ತೋರಿಸಿ 8.5 ಲಕ್ಷ ರೂ. ಆನ್‌ಲೈನ್ ವಂಚನೆ
Published on

ಹಾಸನ: ಪಾರ್ಟ್‌ಟೈಮ್ ಜಾಬಿನಲ್ಲಿ ದಿನನಿತ್ಯ 2ರಿಂದ 3 ಸಾವಿರ ರೂ. ಗಳಿಸಬಹುದು ಎಂದು ಹೇಳಿ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್ ನಂಬಿ ಹಾಸನದ ಸಿದ್ದೇಶ್ವರನಗರದ ವ್ಯಕ್ತಿಯೊಬ್ಬರು 8,57,500 ರೂ. ವಂಚನೆಗೆ ಒಳಗಾಗಿದ್ದಾರೆ.
ಸಂತ್ರಸ್ತನ ಮೊಬೈಲ್ ಸಂಖ್ಯೆಗೆ ಯಾರೋ ಅಪರಿಚಿತ ವ್ಯಕ್ತಿಯಿಂದ ಮೆಸೇಜ್ ಬಂದಿದ್ದು, ಅದರಲ್ಲಿ ಪ್ರತಿನಿತ್ಯ 2000ರಿಂದ 3000 ರೂ. ಗಳವರೆಗೆ ಗಳಿಸಬಹುದಾದ ಪಾರ್ಟ್‌ಟೈಮ್ ಕೆಲಸಗಳು ಖಾಲಿಯಿದೆ ಎಂಬ ಮೆಸೇಜ್ ಬಂದಿದೆ. ಆ ನಂತರ ಅಪರಿಚಿತರು ಸೂಚಿಸಿದ ಟೆಲಿಗ್ರಾಂ ಗ್ರೂಪ್‌ಗೆ ಸೇರಿದ್ದಾರೆ. ಸಂತ್ರಸ್ತನಿಗೆ ಗೂಗಲ್ ಮ್ಯಾಪ್ ಟಾಸ್ಕ್ ಕೊಟ್ಟು ಅದರಲ್ಲಿ ಪ್ರತಿದಿನ 25 ಟಾಸ್ಕ್ ಕೊಟ್ಟು ಒಂದು ರಿವ್ಯೆ ಮಾಡಿದರೆ 50 ರೂ. ಕೊಡುತ್ತಿದ್ದರು. ಹಾಗೆಯೇ ಪ್ರೀಪೇಡ್ ಟಾಸ್ಕ್‌ನಲ್ಲಿ ಹಣ ಹೂಡಿಕೆ ಮಾಡಿದ್ದು, ಇದನ್ನು ಮಾಡಿದ್ದಕ್ಕೆ 200 ರೂ. ಕೊಡುತ್ತಿದ್ದರು. ಬಳಿಕ 2024ರ ಸೆ.19ರಿಂದ 30ರವರೆಗೆ ನನ್ನ ಕಡೆಯಿಂದ ಆರ್‌ಟಿಜಿಎಸ್ ಮೂಲಕ ಒಟ್ಟು 8,57,500 ರೂ. ಹಣವನ್ನು ಹಾಕಿಸಿಕೊಂಡರು. ಆದರೆ, ಅದಕ್ಕೆ ಲಾಭಾಂಶವನ್ನು ಕೊಡದೆ ಹಾಗೂ ನಾನು ಹೂಡಿಕೆ ಮಾಡಿರುವ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದ್ದಾರೆ. ಮೋಸ ಮಾಡಿದ ಅಪರಿಚಿತನನ್ನು ಪತ್ತೆ ಮಾಡಿ, ಕಾನೂನುಕ್ರಮ ಜರುಗಿಸಬೇಕೆಂದು ಸಂತ್ರಸ್ತ ವ್ಯಕ್ತಿ ಹಾಸನ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆ.16ರಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net