ಲಾನುಭವಿಗಳಿಗೆ ಪಂಪ್‌ಸೆಟ್ ವಿತರಣೆ

4-55
ಅಲಖನೂರಿನ ಏಳು ಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಪಂಪ್‌ಸೆಟ್ ಮತ್ತು ಪೂರಕ ಸಾಮಗ್ರಿಗಳನ್ನು ಶಾಸಕ ಪಿ.ರಾಜೀವ ವಿತರಿಸಿದರು. ಬಿ.ಎಲ್. ಉಪ್ಪಿನಾಳ, ಅನಿಲಕುಮಾರ ಯಲ್ಲಟ್ಟಿ, ಸದಾಶಿವ ಪೂಜೇರಿ ಇತರರಿದ್ದರು.
Published on

ಹಾರೂಗೇರಿ, ಬೆಳಗಾವಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಬೆಳಗಾವಿ ವತಿಯಿಂದ ಕುಡಚಿ ಶಾಸಕರು ಆಯ್ಕೆ ಮಾಡಿರುವ ಸಮೀಪದ ಅಲಖನೂರಿನ ಏಳು ಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆ ಅಡಿಯಲ್ಲಿ ಪಂಪ್‌ಸೆಟ್ ಮತ್ತು ಪೂರಕ ಸಾಮಗ್ರಿಗಳನ್ನು ಶನಿವಾರ ಶಾಸಕ ಪಿ.ರಾಜೀವ ವಿತರಿಸಿದರು.

ಲಾನುಭವಿಗಳಿಗೆ ಗಂಗಾಕಲ್ಯಾಣ ಯೋಜನೆಯಲ್ಲಿ ತಲಾ 2.50 ಲಕ್ಷ ರೂ. ಪಂಪ್‌ಸೆಟ್ ಸಾಮಗ್ರಿ ಮತ್ತು ಕೆಇಬಿ ಅನುಮತಿ ಪಡೆಯಲು ಸರ್ಕಾರದಿಂದ 50 ಸಾವಿರ ರೂ.ಗಳನ್ನು ಲಾನುಭವಿಗಳಾದ ಮಹಾದೇವ ಗುನದಾಳ, ಲಕ್ಷ್ಮೀಬಾಯಿ ಸನದಿ, ಲಕ್ಕವ್ವ ನಾಯಿಕ, ಚಂಪವ್ವ ಹನಮಕ್ಕಿ, ಬಿಂದು ಬಸ್ತವಾಡೆ, ಬಂಗಾರೆವ್ವ ನಾಯಿಕ, ಹನುಮಂತ ಸನದಿ ಅವರಿಗೆ ವಿತರಿಸಲಾಯಿತು. ಮಹರ್ಷಿ ವಾಲ್ಮೀಕಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಬಿ.ಎಲ್. ಉಪ್ಪಿನಾಳ, ಸಹಾಯಕ ಅಧಿಕಾರಿ ಅನಿಲ, ಕುಮಾರ ಯಲ್ಲಟ್ಟಿ, ಸದಾಶಿವ ಪೂಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net