ಲಾಡ್ಲೆ ಮಶಾಕ್​ ದರ್ಗಾದಲ್ಲಿ ಲಿಂಗ ಪೂಜೆ

0803Aland1
Published on

ಆಳಂದ: ಪಟ್ಟಣದ ವಿವಾದಿತ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಶುಕ್ರವಾರ ಶಾಸ್ತೊಕ್ತ ಹಾಗೂ ಶಾಂತಿಯುತವಾಗಿ ಪೂಜೆ ನೆರವೇರಿತು. ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಾಗೂ ದರ್ಗಾದಲ್ಲಿ ಪ್ರಾರ್ಥನೆಗೆ ಎರಡು ಬಣದ ತಲಾ ೧೫ ಜನರಿಗೆ ಹೈಕೋರ್ಟ್ ಪೀಠ ಅವಕಾಶ ನೀಡಿತ್ತು. ಬೆಳಗ್ಗೆ ದರ್ಗಾ ಕಮಿಟಿ ಅಧ್ಯಕ್ಷ ಮೋಯಿಜ್ ಅನ್ಸಾರಿ, ಮೊಹಮ್ಮದ್ ಅಫ್ಜಲï ಅನ್ಸಾರಿ ಸೇರಿ ೧೨ ಜನರು ಪ್ರಾರ್ಥನೆ ಸಲ್ಲಿಸಿದರು.
ಸಂಜೆ ೪ಕ್ಕೆ ಶ್ರೀರಾಮ ಸೇನೆ ಗೌರವಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಶಾಸಕ ಡಾ.ಅವಿನಾಶ ಜಾಧವ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ವಿಶ್ವ ಹಿಂದು ಪರಿಷತ್‌ನ ಲಿಂಗರಾಜ ಅಪ್ಪ, ನಾಗೇಂದ್ರ ಕಾಬಡೆ, ಅರ್ಚಕ ಗುರುನಾಥ ಜೋಶಿ, ಪ್ರಮುಖರಾದ ಸಂತೋಷ ಹಾದಿಮನಿ, ಗುಂಡಪ್ಪ, ಈರಣ್ಣ, ಆನಂದಕುಮಾರ ಕಾಶಿರಾಯï, ವಿಜಯ ಕುಮಾರ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಗಂಗಾಪೂಜೆ, ವಿಘ್ನೇಶ್ವರ ಪೂಜೆ, ಮಹಾರುದ್ರಾಭಿಷೇಕ ಸೇರಿ ವಿವಿಧ ಪೂಜೆ ಸಲ್ಲಿಸಿದರು.

ಪಕ್ಷಾತೀತ ಮಾತುಕತೆಗೆ ಸಿದ್ಧ: ಆಳಂದನಲ್ಲಿ ಸೌಹಾರ್ದದಿಂದ ಬದುಕುತ್ತಿದ್ದೇವೆ. ಪಕ್ಷಾತೀತ ಮಾತುಕತೆಗೆ ಸಿದ್ಧ ಎಂದು ಲಾಡ್ಲೆ ಮಶಾಕ್ ದರ್ಗಾ ಕಮಿಟಿ ಅಧ್ಯಕ್ಷ ಮೋಹಿಜ್ ಅನ್ಸಾರಿ, ಮುಖಂಡ ಮೊಹಮ್ಮದ್ ಅಫ್ಜಲ್ ಹೇಳಿದರು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಜಗಳ ಹಚ್ಚುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net