ಲಾಠಿ ಬಿಟ್ಟು, ಹೂ ನೀಡಿದ ಪೊಲೀಸ್

5Naregal1
Published on

ನರೇಗಲ್ಲ: ಲಾಕ್​ಡೌನ್ ಆದೇಶ ಉಲ್ಲಂಘಿಸಿ ವೃಥಾ ತಿರುಗಾಡುತಿದ್ದ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದ್ದ ಪೊಲೀಸರು ಭಾನುವಾರ ಗುಲಾಬಿ ಹೂ ನೀಡುವ ಮೂಲಕ ಸರ್ಕಾರದ ಆದೇಶ ಪಾಲಿಸುವಂತೆ ವಿನೂತನವಾಗಿ ಮನವಿ ಮಾಡಿಕೊಂಡರು.

ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ಭಾನುವಾರ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಸ್ಥಳೀಯ ಠಾಣೆಯ ಸಿಬ್ಬಂದಿ ಗುಲಾಬಿ ಹೂ ನೀಡಿ, ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕು. ವಿನಾ ಕಾರಣ ರಸ್ತೆಗಿಳಿಯಬೇಡಿ, ಈ ಬಾರಿ ಗುಲಾಬಿ ಹೂ ನೀಡಿದ್ದೇವೆ, ಇದು ಪುನರಾವರ್ತನೆಯಾದಲ್ಲಿ ಲಾಠಿ ರುಚಿ ತೋರಿಸುವದು ಅನಿವಾರ್ಯ ಎಂದು ಎಚ್ಚರಿಸಿದರು. ಪಿಎಸ್​ಐ ಬಿ.ಬಿ. ಕೊಳ್ಳಿ, ಎಎಸ್​ಐ ಶೇಖರ ಹೊಸಳ್ಳಿ, ಪೇದೆಗಳಾದ ಬಸವರಾಜ ಮುಳಗುಂದ, ವಿಜಯ ಗೋದಿಗನೂರ, ಪಿ.ಎ. ಇಂಗಳೆ ಇದ್ದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net