

ಲಾಕ್‌ಡೌನ್‌ನಲ್ಲಿ, ಮದ್ಯ, ಭಾರಿ, ಬಿಕರಿ, 2, ತಿಂಗಳಲ್ಲಿ, ಐದು, ಲಕ್ಷ, ಬಾಕ್ಸ್, ಮಾರಾಟ, 324, ಕೋಟಿ, ರೂ., ವಹಿವಾಟು, ಬೆಳಗಾವಿ, Lockdown, Liquor, Heavy, Beverage, 2, Month, Five, Lakhs, Box, Sales, 324, Crores, Rs., Transaction, Belagavi
ಬೆಳಗಾವಿ: ಕರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್‌ಡೌನ್ ೋಷಿಸಿದ್ದರಿಂದ ಎಲ್ಲ ಕ್ಷೇತ್ರವೂ ಸ್ಥಗಿತಗೊಂಡಿವೆ. ಆದರೆ, ಈ ಅವಧಿಯಲ್ಲಿ ಮದ್ಯ ಮಾರಾಟ ಮಾತ್ರ ಜೋರಾಗಿಯೇ ನಡೆದಿದೆ. ಲಾಕ್‌ಡೌನ್ ವೇಳೆ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಮದ್ಯ ಪಾರ್ಸಲ್‌ಗೆ ಅವಕಾಶ ಕಲ್ಪಿಸಿದ್ದರೂ ಈ ಸೀಮಿತ ಅವಧಿಯಲ್ಲೇ ಅಪಾರ ಪ್ರಮಾಣದ ಮದ್ಯ ಮಾರಾಟವಾಗಿದೆ.
ಏ. 1ರಿಂದ ಮೇ 31ರ ಅವಧಿಯಲ್ಲಿ ಬೆಳಗಾವಿ ದಕ್ಷಿಣ ವಲಯದಲ್ಲಿ 2,42,670 ಮದ್ಯದ ಬಾಕ್ಸ್ ಹಾಗೂ 59,570 ಬಿಯರ್ ಬಾಕ್ಸ್ ಮಾರಾಟವಾಗಿದ್ದರೆ, ಬೆಳಗಾವಿ ಉತ್ತರ ವ್ಯಾಪ್ತಿಯಲ್ಲಿ 3,12,436 ಬಾಕ್ಸ್ ಮದ್ಯ ಹಾಗೂ 53,220 ಬಿಯರ್ ಬಾಕ್ಸ್ ಬಿಕರಿಯಾಗಿವೆ. ಒಂದು ಮದ್ಯದ ಬಾಕ್ಸ್‌ನಲ್ಲಿ 9 ಲೀಟರ್ ಮದ್ಯ ಹಾಗೂ ಒಂದು ಬಿಯರ್ ಬಾಕ್ಸ್‌ನಲ್ಲಿ 7.8 ಲೀಟರ್ ಬಿಯರ್ ಇರುತ್ತದೆ.
ಹೆಚ್ಚುವರಿ ಮಾರಾಟ: ಕಳೆದ ವರ್ಷ ಈ ಎರಡು ತಿಂಗಳ ಅವಧಿಗೆ ಹೋಲಿಸಿದರೆ ಬೆಳಗಾವಿ ದಕ್ಷಿಣ ವಲಯದಲ್ಲಿ 1,37,286 ಮದ್ಯ ಬಾಕ್ಸ್ ಹಾಗೂ 31,992 ಬಿಯರ್ ಬಾಕ್ಸ್ ಹೆಚ್ಚುವರಿಯಾಗಿ ಮಾರಾಟವಾಗಿವೆ. ಬೆಳಗಾವಿ ಉತ್ತರ ವ್ಯಾಪ್ತಿಯಲ್ಲಿ 1,72,906 ಬಾಕ್ಸ್ ಮದ್ಯ ಹಾಗೂ 28,462 ಬಾಕ್ಸ್ ಬಿಯರ್ ಹೆಚ್ಚುವರಿಯಾಗಿ ಮಾರಾಟವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ ಅನ್‌ಲಾಕ್ ಇತ್ತು ಮದ್ಯದ ಅಂಗಡಿಗಳು ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ದಿನವಿಡೀ ತೆರೆದಿದ್ದವು. ಆದರೂ 1,05,384 ಮದ್ಯ, 27,578 ಬಿಯರ್ ಬಾಕ್ಸ್‌ಗಳಷ್ಟೇ ಮಾರಾಟವಾಗಿದ್ದವು. ಗೋಕಾಕ ಹಾಗೂ ಚಿಕ್ಕೋಡಿ ತಾಲೂಕಿನಲ್ಲಿ ಅತಿ ಹೆಚ್ಚು ಮದ್ಯ ಬಿಕರಿಯಾಗಿದೆ.
ಲಾಕ್‌ಡೌನ್ ಇದ್ದರೂ ಕೇವಲ 2 ತಿಂಗಳಲ್ಲಿ ಮದ್ಯ ಮಾರಾಟದಿಂದ ಇಲಾಖೆಗೆ ಭರಪೂರ ಆದಾಯ ಬಂದಿದೆ. ಬೆಳಗಾವಿ ಉತ್ತರದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ 247 ಕೋಟಿ ರೂ., ಬೆಳಗಾವಿ ದಕ್ಷಿಣದಲ್ಲಿ 77 ಕೋಟಿ ರೂ. ಆದಾಯ ಬಂದಿದೆ. ಲಾಕ್‌ಡೌನ್ ಅವಧಿ ಕಳೆಯಲು ಪಾನಪ್ರಿಯರು ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಇತರೆಲ್ಲ ಕ್ಷೇತ್ರ ಆದಾಯವಿಲ್ಲದೆ ಸಂಕಷ್ಟದಲ್ಲಿರುವಾಗ ಲಾಕ್‌ಡೌನ್ ಮಧ್ಯೆಯೂ ಹೆಚ್ಚುವರಿ ಮದ್ಯ ಮಾರಾಟವಾಗುವ ಮೂಲಕ ಇಲಾಖೆಗೆ ಹೆಚ್ಚಿನ ಆದಾಯ ತಂದಿದೆ.
ಅಕ್ರಮ ಮದ್ಯ ಮಾರಾಟ ಹಾಗೂ ಸಾಗಣೆಗೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳು ಬೆಳಗಾವಿ ದಕ್ಷಿಣದ ವಿವಿಧೆಡೆ ದಾಳಿ ನಡೆಸಿ ಏಪ್ರಿಲ್ 23ರಿಂದ ಜೂನ್ 6ರ ವರೆಗೆ 42 ಪ್ರಕರಣ ದಾಖಲಿಸಿಕೊಂಡಿದ್ದಾರೆ. 9 ಬೈಕ್, 135 ಲೀಟರ್ ಗೋವಾ ಮದ್ಯ, 350 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಕ್ಕೆ ಪಡೆದಿದ್ದಾರೆ. 3,30,987 ರೂ. ಮೌಲ್ಯದ ಸಾಮಗ್ರಿಗಳನ್ನೂ ವಶಪಡಿಸಿಕೊಂಡಿದ್ದಾರೆ.
ಲಾಕ್‌ಡೌನ್‌ನಿಂದಾಗಿ ಜನ ಮನೆಯಿಂದ ಹೊರ ಬಂದಿಲ್ಲ. ಹೀಗಾಗಿ ಅಕ್ರಮ ಮದ್ಯ ಮಾರಾಟ ಪ್ರಕರಣ ತಗ್ಗಿವೆ. ಅಲ್ಲಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಅದನ್ನು ತಡೆಯಲು ನಮ್ಮ ಇಲಾಖಾ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ.| ಕೆ. ಅರುಣಕುಮಾರ ಅಬಕಾರಿ ಉಪ ಆಯುಕ್ತ, ಬೆಳಗಾವಿ ಉತ್ತರ
| ಜಗದೀಶ ಹೊಂಬಳಿ ಬೆಳಗಾವಿ