ಲಾಕ್​ಡೌನ್​ಗೆ ಉಪ್ಪಿನಬೆಟಗೇರಿ ಗ್ರಾಮಸ್ಥರ ಸಹಕಾರ

5 UPBR 1
Published on

ಉಪ್ಪಿನಬೆಟಗೇರಿ: ಕರೊನಾ ತಡೆಯಲು ಸರ್ಕಾರ ಭಾನುವಾರ ಲಾಕ್​ಡೌನ್ ಘೊಷಿಸಿದ್ದರಿಂದ ಗ್ರಾಮದಲ್ಲಿ ವಾಹನಗಳು, ಸಾರ್ವಜನಿಕರ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಲಾಕ್​ಡೌನ್​ಗೆ ಗ್ರಾಮಸ್ಥರು ಸಹಕಾರ ನೀಡಿದರು. ಮನೆಯಿಂದ ಯಾರೂ ಹೊರಗಡೆ ಬರಲಿಲ್ಲ. ಕಿರಾಣಿ, ಆಸ್ಪತ್ರೆ, ಔಷಧ, ಹಾಲಿನ ಡೇರಿ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಶನಿವಾರ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದರು. ಮಾಸ್ಕ್ ಧರಿಸದೆ ಸಂಚರಿಸಿದವರಿಗೆ ಪೊಲೀಸರು ದಂಡ ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net