

ಹುಬ್ಬಳ್ಳಿ: ಕಾರ್ವಿುಕರ ಕೆಲಸದ ಅವಧಿ ಹೆಚ್ಚಳ ಖಂಡಿಸಿ 10ಕ್ಕೂ ಹೆಚ್ಚು ಜನ ಸೇರಿ ಹಳೇ ಹುಬ್ಬಳ್ಳಿಯ ಎ.ಜೆ. ಮುಧೋಳ ಭವನದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ್ದ ಧಾರವಾಡ ಜಿಲ್ಲಾ ಕಾರ್ವಿುಕ ಸಂಘಟನೆಗಳ ಒಕ್ಕೂಟ (ಜೆಸಿಟಿಯು) ಮುಖಂಡರ ವಿರುದ್ಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಬುಧವಾರ ಲಾಕ್ಡೌನ್ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಪರಸ್ಪರ ಅಂತರ ಕಾಯ್ದುಕೊಳ್ಳದೇ 10ಕ್ಕೂ ಹೆಚ್ಚು ಜನ ಒಂದೆಡೆ ಸೇರುವ ಮೂಲಕ ಲಾಕ್ಡೌನ್ ಉಲ್ಲಂಘಿಸಿದ್ದರು. ಒಕ್ಕೂಟದ ಪದಾಧಿಕಾರಿಗಳಾದ ಮಹೇಶ ಪತ್ತಾರ, ಬಾಬಾಜಾನ ಮುಧೋಳ ಸೇರಿ 12ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಕಸಬಾಪೇಟ ಠಾಣೆ ಪೊಲೀಸರು ತಿಳಿಸಿದ್ದಾರೆ.