ಲಾಕ್ಡೌನ್ ಕಲಬುರಗಿಯಲ್ಲಿ ಫುಲ್ ಟೈಟ್

0804klb07
Published on

ಕಲಬುರಗಿ: ಕೊರಾನಾ ಮಹಾಮಾರಿಗೆ ಮತ್ತೊಬ್ಬ ವೃದ್ಧ ಬಲಿಯಾಗಿ, ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಬುಧವಾರದಿಂದ ಕಲಬುರಗಿಯಲ್ಲಿ ಲಾಕ್ಡೌನ್ನ್ನು ಪೊಲೀಸರು ಭಾರಿ ಪ್ರಮಾಣದಲ್ಲಿ ಫುಲ್ ಟೈಟ್​ ಮಾಡಿದ್ದಾರೆ. ಅನಗತ್ಯವಾಗಿ ಓಡಾಡುತ್ತಿದ್ದ ನೂರಾರು ಬೈಕ್ಗಳನ್ನು, ಕಾರ್ಗಳನ್ನು ನಗರದ ವಿವಿಧ ಕಡೆಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಗತ್ಯ ವಸ್ತುಗಳಾದ ಕಿರಾಣಿ ಅಂಗಡಿಗಳನ್ನು ಸಹ ಬೆಳಗ್ಗೆ ಕೆಲಹೊತ್ತು ಮಾತ್ರ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಬುಧವಾರ ಬೆಳಗ್ಗೆ ಸ್ಟೇಷನ್ ಬಜಾರ ಮತ್ತು ಅಶೋಕ ನಗರ ಠಾಣೆಗಳ ಪ್ರದೇಶಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ತೆರೆದಿದ್ದ ಕೆಲ ಅಂಗಡಿಗಳ ಮುಂದೆ ಜನರು ಜಮಾಗೊಂಡಿದ್ದರಿಂದ ಖುದ್ದು ಪೊಲೀಸರೆ ಅವನ್ನು ಬಂದ್ ಮಾಡಿಸಿದರು. ಅಲ್ಲದೆ ಪೋಲಿಸರು ಬುಧವಾರ ಅನಗತ್ಯ ಸಂಚಾರಿಗಳ ಮೇಲೆ ಲಾಠಿ ಬೀಸಲು ಆರಂಭಿಸಿದರು. ಕರೊನಾಕ್ಕೆ ಬಲಿಯಾಗಿರುವ ವೃದ್ಧನ ಸಂಬಂಧಿಕರಿರುವ ರೆಹಮತ್ನಗರಕ್ಕೆ ಆತ ಹೋಗಿ ಇದ್ದು ಬಂದಿದ್ದ ಎಂಬುದು ಗೊತ್ತಾಗುತ್ತಲೇ ಸಂಜೆ ಹೊತ್ತಿಗೆ ಜೇವರ್ಗಿ ಹಳೆಯ ರಸ್ತೆಯಲ್ಲಿರುವ ರೈಲ್ವೆ ಅಂಡರ್ ಬ್ರೀಜ್ ಬಳಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದ ಜನರು ಪರದಾಡುವಂತಾಗಿತ್ತು.
ಲಾಕ್ ಡೌನ್ದಿಂದಾಗಿ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದಾಗಿವೆ. ಆದರೂ ಜನರು ಓಡಾಟ ನಡೆಸುವುದು ನಿಂತಿಲ್ಲ. ತಿಳಿಹೇಳಿ ಸಾಕಾಗಿ ಹೋಗಿದ್ದರಿಂದ ಸಹನೆ ಕಳೆದುಕೊಂಡ ಪೊಲೀಸರು ಹಲವು ಕಡೆಗಳಲ್ಲಿ ಸಂಚರಿಸುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು. ವಶಪಡಿಸಿಕೊಂಡಿರುವ ವಾಹನಗಳು ವಿಧಾನಸೌಧದ ಆವರಣದಲ್ಲಿರುವ ಸಂಚಾರ ಪೋಲಿಸ್ ಠಾಣೆ, ವಿಶ್ವವಿದ್ಯಾಲಯ ಠಾಣೆ, ಎಂ.ಬಿ. ನಗರದ ಹೀಗೆ ಹಲವು ಕಡೆಗಳಲ್ಲಿ ತುಂಬಿ ಹೋಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net