ಲಾಕ್ಡೌನ್ ಉಲ್ಲಂಘನೆ, 2864 ವಾಹನ ವಶ

satish kumar ips
Published on

ಕಲಬುರಗಿ: ಲಾಕ್ಡೌನ್ ಮತ್ತು ನಿಷೇಧಾಜ್ಞೆ ಉಲ್ಲಂಘಿಸಿ ಓಡಾಡುತ್ತಿದ್ದ 2864 ವಾಹನ ವಶಪಡಿಸಿಕೊಂಡ ಪೊಲೀಸರು, ನಿಯಮ ಧಿಕ್ಕರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ 9 ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ್ ಮತ್ತು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ.
ನಗರದಲ್ಲಿ ಕರೊನಾಕ್ಕೆ ಮತ್ತೊಬ್ಬ ವೃದ್ಧ ಬಲಿಯಾದ ಬೆನ್ನಲ್ಲೇ ಬಂದ್ ಇನ್ನಷ್ಟು ಚುರುಕುಗೊಳಿಸಿರುವ ಪೊಲೀಸರು, ದಿನವಿಡೀ ಕಾರ್ಯಾಚರಣೆ ಶುರುವಿಟ್ಟಿದ್ದಾರೆ. ಬಿಗ್ ಬಜಾರ್, ರಿಲಾಯನ್ಸ್ ಮಾರ್ಟ ಸೇರಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಿಸುವ ಮೂಲಕ ಇನ್ನಷ್ಟು ಕಠಿಣ ಕ್ರಮ ಕೈಗೊಂಡಿದ್ದಾರೆ.
ದರ್ಗಾ , ರೋಜಾ, ಚೋಟಾ ರೋಜಾ, ನೂರಾನಿ ಮೊಹಲ್ಲಾ, ಖಮರ್ ಕಾಲನಿ, ಖಾಜಾ ಕಾಲನಿಗಳಲ್ಲಿ ಲಾಕ್ಡೌನ್ ಉಲ್ಲಂಘಿಸಿ ಹೋಟೆಲ್ ಇತರ ಅಂಗಡಿಗಳನ್ನು ತೆರೆದಿಟ್ಟಿದ್ದ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ರುಕ್ಮೋದ್ದೀನ್, ಸತ್ತಾರ್, ಶೇಖ ಅಬ್ದುಲ್, ಜಾಹೀದ್, ಶಫಿ ಅಬ್ದುಲ್, ಮಹ್ಮದ್ ಅಯ್ಯೂಬ್, ಝೀಶಾನ್ ಮೊದಲಾದವರನ್ನು ಇನ್ಸ್ಪೆಕ್ಟರ್ ಎಸ್.ಅಸ್ಲಂಬಾಷಾ ಮತ್ತು ಸಿಬ್ಬಂದಿ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ನಗರದಲ್ಲಿ ಗುರುವಾರ ಒಂದೇ ದಿನ 349 ವಾಹನ ಜಪ್ತಿ ಮಾಡಿಕೊಂಡು ಪೊಲೀಸ್ ಮೈದಾನದಲ್ಲಿ ನಿಲ್ಲಿಸಲಾಗಿದ್ದು, ಲಾಕ್ಡೌನ್ ಮುಗಿಯುವವರೆಗೂ ಬಿಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹನುಮ ಜಯಂತಿ 23 ಜನರ ವಿರುದ್ಧ ಕೇಸ್
ಕಲಬುರಗಿ: ಕರೊನಾ ಹಿನ್ನೆಲೆಯಲ್ಲಿ ಲಾಕ್ಡೌನ್ ಉಲ್ಲಂಘಿಸಿ ದಸ್ತಾಪುರ ಗ್ರಾಮದಲ್ಲಿ ಗುರುವಾರ ಹನುಮ ಜಯಂತಿ ಆಚರಿಸಿ ಮೆರವಣಿಗೆ ನಡೆಸಿದ್ದರಿಂದ 23 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾಟರ್ಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಜಾತ್ರೆ, ಸಂತೆ, ಸಮಾರಂಭ ನಿಷೇಧಿಸಿದ್ದರೂ ದಸ್ತಾಪುರದಲ್ಲಿ ಉಲ್ಲಂಘಿಸಿ ಹನುಮ ಜಯಂತಿ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಸಿದ ಶಾಂತವೀರ ಪೊಲೀಸ್ ಪಾಟೀಲ್ ಸೇರಿ 22 ಜನರ ವಿರುದ್ಧ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜುಕೋರರ ಬಂಧನ 1 ಲಕ್ಷ ರೂ. ವಶ
ಕಲಬುರಗಿ: ಕರೊನಾ ಹಾವಳಿಯಲ್ಲೂ ಗುಂಪಾಗಿ ಕುಳಿತು ಅಮಾನ್ ನಗರದಲ್ಲಿ ಜೂಜಾಟದಲ್ಲಿ ತೊಡಗಿದ್ದ 12 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಜಂಜಂ ಕಾಲನಿ, ಖಮರ್ ಕಾಲನಿ, ನೂರಾನಿ ಗಲ್ಲಿ ನಿವಾಸಿಗಳು. ಬಂಧಿತರಿಂದ ಪಣಕ್ಕಿಟ್ಟಿದ್ದ 1,02,510 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕಿಶೋರಬಾಬು ತಿಳಿಸಿದ್ದಾರೆ. ಸಿಸಿಬಿ ಪಿಎಸ್ಐ ವಾಜೀದ್ ಕೋತ್ವಾಲ್, ಸಿಬ್ಬಂದಿ ಶರಣಬಸಪ್ಪ ಇಂಡಿ, ರವೀಂದ್ರ, ಮಲ್ಲಿಕಾಜರ್ುನ ಮತ್ತು ರಾಕೇಶ್ ಕಾಯರ್ಾಚರಣೆ ನಡೆಸಿದ್ದು, ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net