ಲಸಿಕೆ ಪಡೆಯಲು ಸರತಿ ಸಾಲು

12Jaggu5_web
ಕರೊನಾ ಲಸಿಕೆ ಪಡೆಯಲು ಬುಧವಾರ ಬಿಮ್ಸ್ ಆಸ್ಪತ್ರೆಯಲ್ಲಿ ಕಾಯುತ್ತಿರುವ ಸಾರ್ವಜನಿಕರು.
Published on

ಬೆಳಗಾವಿ: ಇಲ್ಲಿಯ ಬಿಮ್ಸ್‌ನ ಲಸಿಕಾಕರಣಕ್ಕೆ ಕೋವ್ಯಾಕ್ಸಿನ್ ಕೊರತೆಯಾಗಿದ್ದು, ಬುಧವಾರ 2ನೇ ಡೋಸ್ ಪಡೆಯಲು ಬಂದಿದ್ದ ನೂರಾರು ಜನರು ಸಾಲುಗಟ್ಟಿ ನಿಂತು ಸುಸ್ತಾದರು.

ಬುಧವಾರ ಕೋವ್ಯಾಕ್ಸಿನ್ ಲಸಿಕೆ ಬಂದಿರಬಹುದೆಂದು ತಿಳಿದು ಬೆಳಗ್ಗೆ 9 ಗಂಟೆಗೆ ಬಿಮ್ಸ್ಗೆ ಆಗಮಿಸಿದ ಜನರು, ಲಸಿಕೆ ಪಡೆಯಲು ಸಾಲು ಹಚ್ಚಿದರು. ಆದರೆ, ಲಸಿಕೆ ಸಿಗದೆ ನಿರಾಸೆ ಅನುಭವಿಸಿದರು. ಅಲ್ಲದೆ, 18 ವರ್ಷ ಮೇಲ್ಪಟ್ಟವರೂ ಸಹ ಫಸ್ಟ್ ಡೋಸ್ ಪಡೆಯಲು ಮುಗಿಬಿದ್ದಿದ್ದರು. ಕೋವ್ಯಾಕ್ಸಿನ್ ಲಸಿಕೆ ಖಾಲಿ ಆಗಿದೆ ಎಂದು ಬಿಮ್ಸ್ ಸಿಬ್ಬಂದಿ ಜನರನ್ನು ವಾಪಸ್ ಕಳುಹಿಸುತ್ತಿದ್ದ ವೇಳೆ ವರದಿ ಮಾಡಲು ತೆರಳಿದ್ದ ಮಾಧ್ಯಮದವರೊಂದಿಗೆ ಬಿಮ್ಸ್ ಸಿಬ್ಬಂದಿ ವಾಗ್ವಾದ ನಡೆಸಿದರು.

2ನೇ ಡೋಸ್‌ಗೆ ಮಾತ್ರ ಅವಕಾಶ: ನಗರದ ಬಿಮ್ಸ್ ಸಿಬ್ಬಂದಿ ಎಡವಟ್ಟಿನಿಂದ ಕೋವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಬಂದವರಿಗೆ ನಿರಾಸೆ ಆಗಿದೆ. ವಾಸ್ತವವಾಗಿ 2ನೇ ಡೋಸ್ ಪಡೆಯುವವರಿಗೆ ಮಾತ್ರ ಕೋವ್ಯಾಕ್ಸಿನ್ ನೀಡುವಂತೆ ಇಲಾಖೆಯಿಂದ ಸೂಚಿಸಲಾಗಿತ್ತು. ಆದರೆ, ಬಿಮ್ಸ್ ಸಿಬ್ಬಂದಿ ಕೆಲವರಿಗೆ ಕೋವ್ಯಾಕ್ಸಿನ್ ಮೊದಲ ಡೋಸ್ ಲಸಿಕೆ ನೀಡಿದ್ದಾರೆ. ಹೀಗಾಗಿ, ಕೋವ್ಯಾಕ್ಸಿನ್ 2ನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆ ಸಿಗದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net