ಲಸಿಕೆ ಪಡೆದ ಮಗು ಸಾವು!

Published on

ಶಿರಾ: ರೋಟಾ ವೈರಸ್​ ಲಸಿಕೆ ಹಾಕಿಸಿದ ಬಳಿಕ 5 ತಿಂಗಳ ಮಗು ಮೃತಪಟ್ಟಿರುವುದಾಗಿ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ತಾಲೂಕಿನ ಮಾಗೋಡ ಗ್ರಾಮದ ಕೀರ್ತನಾ&ಲಕ್ಷಿ$್ಮಕಾಂತ್​ ದಂಪತಿಯ ಐದು ತಿಂಗಳು ಮಗುವಿಗೆ ಮಾ.6ರಂದು ಬೆಳಗ್ಗೆ 11.30ರ ಸಮಯದಲ್ಲಿ ರೋಟಾ ವೈರಸ್​ ಲಸಿಕೆ ಹಾಕಿಸಲಾಗಿತ್ತು. ಮಧ್ಯಾಹ್ನ 3.30ರ ಹೊತ್ತಿಗೆ ಭೇದಿಯಿಂದ ಮಗು ಅಸ್ವಸ್ಥಗೊಂಡಿದ್ದು, ಕೂಡಲೇ ಪಾಲಕರು ಶಿರಾ ತಾಲೂಕು ಆಸ್ಪತ್ರೆಗೆ ಕರೆದೊಯ್ಯಿದ್ದಾರೆ.

ಈ ವೇಳೆ ತುಮಕೂರಿಗೆ ಕರೆದುಕೊಂಡುವಂತೆ ತಿಳಿಸಿದ್ದು, ಅಂತೆಯೇ, ತುಮಕೂರಿನ ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯ ಆಸ್ಪತ್ರೆಗೆ ಕೊಂಡೊಯ್ಯದಿದ್ದು, ಮಗು ಪರಿಶೀಲಿಸಿದ ವೈದ್ಯರು

ಮಗು ಮೃತಪಟ್ಟು ಒಂದು ಗಂಟೆಯಾಗಿದೆ ಎಂದು ತಿಳಿಸಿದ್ದಾರೆ. ಲಸಿಕೆ ಹಾಕಿದ ಬಳಿಕವೇ ಮಗು ಮೃತಪಟ್ಟಿರುವುದಾಗಿ ಪಾಲಕರು ಆಕ್ರೋಶ ಹೊರಹಾಕಿರುವುದಲ್ಲದೆ, ಶಿರಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐದು ತಿಂಗಳ ಮಗು ಮೃತಪಟ್ಟಿರುವುದು ನಿಜ. ಲಸಿಕೆಯಿಂದ ಮಗು ಮೃತಪಟ್ಟಿದೆಯೋ ಅಥವಾ ಬೇರೆ ಕಾರಣಕ್ಕೋ ಎಂಬುದು ತಿಳಿದುಬಂದಿಲ್ಲ. ಮಗುವಿನ ಕೆಲವು ಮಾದರಿಗಳನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

| ಡಾ.ಚಂದ್ರಶೇಖರ್​ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net